Submission 24206

ಬದುಕಿನ ಪುಟಗಳು

ರಚನೆ : ಅರವಿಂದ ಹೆಚ್ ಆರ್

----------------------------------

ಕಳೆದು ಹೋಗಬೇಕು ನಾನು ನನ್ನೀ ಜೀವನದಲ್ಲಿ ಮರೆಯುವಂತೆ ನನ್ನೆಲ್ಲಾ ಹಿಂದಿನ ಪುಟಗಳನ್ನ, ಪುಟಗಳು ಹೆಚ್ಚುತ್ತವಾಗ ಹಿಂಬದಿಯನ್ನೇ ಮರೆಸುವಂತೆ ಬಹುಶಃ ಕಳೆದೇ ಹೊಗುವೆನಾಗ,ಜೀವನವನ್ನೇ ನಾ ಮರೆಯುವಂತೆ ಕೂರಬೇಕು ಇಳಿಸಂಜೆಯಲಿ ನೆನೆಯುತ್ತಾ,ನೆನೆಸುತ್ತಾ ಹೊಸಪುಟಗಳ ಬಣ್ಣಗಳನು, ಬೇಸರವೆನಿಸಿ ಬೈಯುತ್ತಾ ಪುಸ್ತಕವದು ಮೂಡುವಾಗ ಮಸ್ತಕದ ಪಟಲದಲಿ ಆ ಪುಟಗಳು ಪ್ರಶ್ನಿಸಬೇಕು ಮರೆತ ತನ್ನೀ ಹಳೆಗೆಳೆಯನಲ್ಲಿ ಹುಡುಕುವೆನೆಲ್ಲಿ ಉತ್ತರಗಳನಾಗ,ಕೋರಿಕೆಗಳಷ್ಟೇ ಉಳಿದಿರುವಾಗ ಕೊರುವುದ್ಹೇಗೆ‌ ಅರಸುವೆನೆಂದು ಮತ್ತೆ, ಮರೆತ ಪುಟಗಳನ್ನು ತಬ್ಬುವೆನು ಒಮ್ಮೆ ಸ್ಮೃತಿಯ ಪುಟಗಳನ್ನೆಲ್ಲಾ ಅರಿವೆ ಆಗ ಹೊಸಪುಟಗಳು, ಬಣ್ಣ ಹೊಂದಿದ್ದವು ಬದುಕನ್ನಲ್ಲಾ...

----------------------------------

ನೋಂದಣಿ ಐಡಿ : KPF-S1-6241

19
Total Votes
102
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!