ಸ್ತ್ರೀ ಎಂಬ ದೇವತೆ..
ರಚನೆ : ಅದಂ ಖಾನ್
----------------------------------
ಇಳೆಯಷ್ಟು ಬೃಹದಾಕಾರದ ಸಹಿಷ್ಣುತೆಯನ್ನು ಹೊಂದಿರುವವಳು ನೀ ಆಕಾಶದಷ್ಟು ವಿಶಾಲ ಹೃದಯವನ್ನು ಹೊಂದಿರುವವಳು ನೀ ಸಮುದ್ರದಷ್ಟು ಆಳವಾದ ಪ್ರೀತಿಯನ್ನು ಹೊಂದಿರುವವಳು ನೀ ಸ್ತ್ರೀ ಎಂಬ ದೇವತೆಯೇ ನೀ....!! ಸ್ತ್ರೀ ಎಂಬ ದೇವತೆಯೇ ನೀ....!! ರಕ್ತವನ್ನು ಅಮೃತವನ್ನಾಗಿಸಿ ಹಾಲುಣಿಸುವ ತಾಯಿಯು ನೀ..! ಒಡಹುಟ್ಟಿದವರನ್ನು ಅಕ್ಕರೆಯಿಂದ ಲಾಲಿಸಿ ಪಾಲಿಸುವ ಅಕ್ಕಳೂ ನೀ...! ಸಂಸಾರವೆಂಬ ಬಂಡಿಯ ತೇರನು ಜೊತೆಯಾಗಿ ಎಳೆಯುವ ಮಡದಿಯು ನೀ...! ಸಣ್ಣ ಹೆಜ್ಜೆಗಳನ್ನು ಇಡುತ್ತಾ ಗೆಜ್ಜೆಯ ನಾದದಿ ದಣಿದಿರುವ ಜೀವಕೆ ನೆಮ್ಮದಿ ನೀಡುವ ಮಗಳೂ ನೀ ಸ್ತ್ರೀ ಎಂಬ ದೇವತೆಯೇ ನೀ ....!! ಸ್ತ್ರೀ ಎಂಬ ದೇವತೆಯೇ ನೀ!!
----------------------------------
ನೋಂದಣಿ ಐಡಿ : KPF-S1-6238
