ಇಂದೇ ಬಿಟ್ಟುಬಿಡಿ !
ರಚನೆ : ಸತ್ಯಾನಂದ ಮೂರ್ತಿ ಎ ವಿ
----------------------------------
ಸಿಗರೇಟು ರೇಟು ಸಿಗರೇಟು ರೇಟು ಸಿಗರೇಟು ತುಂಬಾನೇ ರೇಟು ಅದರಿಂದ ಪ್ರಾಫಿಟು ವಾಟು ? ನಲವತ್ತ್ ವರ್ಷ ಬದುಕೋದು ಡೌಟು ||ಸಿಗರೇಟು|| ಯಾವ್ದೆ ಹೊಡಿ ಎಷ್ಟೇ ಹೊಡಿ ಬರೋದ್ ಮಾತ್ರ ಅದೇ ಹೊಗೆ ಆ ಹೊಗೆ ಒಂದೆ ಬಂಡವಾಳ ಮುಂದೆ ಬರೋ ಕ್ಯಾನ್ಸರಿಗೆ ಬುದ್ಧಿವಾದ ಹೇಳಬಹುದು ಬದುಕೋ ಆಸೆ ಇರೋನಿಗೆ ಕೇಳದಿದ್ರೆ ಬಿಟ್ಟು ಬಿಡ್ರಿ ಅದ್ರಿಂದಲೇ ಸಾಯೋನಿಗೆ ಫ್ರೆಂಡ್ ಸಿಕ್ಕಿದ್ ಖುಷಿಗೊಂದು, ಸಾಲದಿದ್ರೆ ಇನ್ನೊಂದು ಲವರ್ ನೆನೆದು ಮತ್ತೊಂದು, ಬೇಜಾರ್ ಆದ್ರೆ ಅದಕ್ಕೊಂದು ||ಸಿಗರೇಟು|| ಇವತ್ ಬಿಡ್ತಿನ್ ನಾಳೆ ಬಿಡ್ತಿನ್ ಅಂತ ಕೂತ್ರೆ ಆಗಲ್ಲ , ಉದಾಸೀನ ಮಾಡಬೇಡ ಇನ್ನು ಕಾಲ ಮಿಂಚಿಲ್ಲ. ಸಿಗರೇಟು ರೇಟು ಸಿಗರೇಟು ರೇಟು ಕಿಂಗ್ ಗಿಂತ ಸ್ಮಾಲ್-ಉ ತುಂಬಾನೇ ಘಾಟು.
----------------------------------
ನೋಂದಣಿ ಐಡಿ : KPF-S1-6218
