Submission 24032

ನಾವು ಯಾರು?

ರಚನೆ : ಕಾರ್ತಿಕ್ ಹೆಚ್ ಪಿ

----------------------------------

ನಾವಿದ್ದೇವೆ ಆದರೂ ಇಲ್ಲ, ಇದ್ದರೆ ಎಲ್ಲಿದ್ದೇವೆ , ಇಲ್ಲ ಎಂದರೆ ಎಲ್ಲಿ ಹೋದೆವು, ನಾಳಿನ ಚಿಂತೆ ಚಿಂತನೆ ಇಲ್ಲ, ಇವತ್ತಿನದೆ ಹಾಸಿ ಹೋದೆಯುವಷ್ಟು ಇದೆಯಲ್ಲ , ಎಳೆಗರು ಹಳೆ ಹುಲಿಯಾಗಿ ಎಳೆದರು ಬಾರದಷ್ಟು ದೂರ ಚಲಿಸಿ, ದೂರುಗಳು ನೀಡದ್ದಷ್ಟು ವಿಶಾಲವಾಗಿಹ ಪ್ರದೇಶದೊಳು ಇದ್ದೇವೆ ಇರದಿದ್ದವರ ನಡುವೆ. ಗಮ್ಯ ಸ್ಥಾನದ ಹತ್ತಿರವಿದ್ದೇವೆ ದಾರಿ ತಪ್ಪಿದ ಹಾದಿಯಲ್ಲಿ. ಹುದುಗಿ ಹೋಗಿದ್ದೇವೆ ಅವರ ಢಾಳಾದ ಉದರದ ಅಡಿ, ಗಡಿ ಮೀರಿದ ಉಡುಗೆಯೊಳಗೆ. ಕಂಡರು ಕಾಣುತ್ತಿಲ್ಲ ಕೂಗಿ ಕರೆದರು ಕೇಳುತ್ತಿಲ್ಲ ಅರಚಿ ಪರಚಿಕೊಂಡರು ಸಿಗುತ್ತಿಲ್ಲ ನಾವು ಆದರೂ ಸಿಕ್ಕಿ ಹಾಕಿ ಕೊಂಡಿದ್ದೇವೆ ಈ ಸಿಕ್ಕು ಸಿಕ್ಕಾದ ಜನರ ಮಧ್ಯೆ.

----------------------------------

ನೋಂದಣಿ ಐಡಿ : KPF-S1-6212

0
Total Votes
5
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!