Submission 23970

ಮನುಜ ಪ್ರಕೃತಿ

ರಚನೆ : ಲಿಂಗರಾಜು ಎ ಕಾಳೇನಹಳ್ಳಿ ಮೇಷ್ಟ್ರು

----------------------------------

ಇರುವೆ ನೂರು ಸಾಲುಗಟ್ಟಿ ಹೋದರು ನೀಡಿತು ಮನುಜರಿಗೊಂದು ಸಂದೇಶವನು ಹಸಿದ ಹುಲಿಯೂ ಹಂಚು ಹಾಕಿ ಬೇಟೆಯಾಡಿ ನೀಡಿತೊಂದು ಸಂದೇಶವನು ಹಾರೋ ಹಕ್ಕಿ ಕೂಗು ಕುಣಿವ ನವಿಲ ಸೊಬಗು ಹೇಳಿ ಮಾಡಿಸಲು ಸಾಧ್ಯವೇನು ಪ್ರಕೃತಿಯ ಕೂಗು ಪರಮಾನ್ನವಲ್ಲವೇನು // ಹುಟ್ಟು ಸಾವು ಇಲ್ಲದೆ ಬಾಳು ಉಂಟೆ ಮೇರೆ ಮೀರೆ ಬದುಕಲು ಜಾಗವುಂಟೆ ಅಕ್ಕಿಅನ್ನ ಬೆಳೆ ನೀರು ಯಾರ ಸ್ವತ್ತು ಅಗೆದು ಬಗೆದು ಇಟ್ಟರೆ ನೋಡು, ಅದರ ಗತ್ತು ಆಕಾಶಕೆ ರೆಂಬೆ ಚಾಚಿ ಬೆಳೆದ ಹೆಮ್ಮರ ದೇವೇಂದ್ರನ ಸಭೆಯಲ್ಲೂ ನುಡಿಯಲಿಲ್ಲ ಅಪಸ್ವರ //

----------------------------------

ನೋಂದಣಿ ಐಡಿ : KPF-S1-6192

0
Total Votes
5
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!