ನಿಲ್ಲುವವರಲ್ಲ
ರಚನೆ : ಚರಣ್ ರಾಜ್ ಡಿ ಪಿ
----------------------------------
ಗುಡಿಸಲಲ್ಲಿ ಬೆಳೆಯುತ್ತಿದೆ ಬಂಗಲೆಯ ಕನಸು ಬಂಗಲೆಯಲ್ಲಿ ನರಳುತ್ತಿದೆ ಬಾಂಧವ್ಯದ ಕೂಸು ಎಲ್ಲದಕ್ಕೂ ಕಾರಣವು ಕಾಗದದ ಕಾಸು ಅರಿಯದೆ ಅವಿವೇಕಿಯಾದ ಮನಸು ಸರಿ-ತಪ್ಪು ಸಿಹಿ-ಕಹಿ ನೋವು-ನಲಿವು ಒಮ್ಮೊಮ್ಮೆ ಒಂದೊಂದರ ಮೇಲೆ ಒಲವು ಎಲ್ಲದರಲ್ಲೂ ಸಿಗಲೆ ಬೇಕೆಮಗೆ ಗೆಲುವು ಸೋಲೊಳಗಿನ ಸವಿಯ ಸವಿಯಲ್ಲ ನಾವು ಹೆಚ್ಚೆಚ್ಚು ತಿಳಿದುಕೊಂಡಿವಿ ಅಂದುಕೊಂಡು ಬೇರೆಯವರೆದುರು ತಲೆ ತಗ್ಗಿಸಲ್ಲ ಎಂಬ ಮೊಂಡು ಹುಟ್ಟೂರು ಬಿಟ್ಟು ಊರೂರ ತಿರುಗಿಕೊಂಡು ಬೇಸರದಲ್ಲಿ ಅನ್ನಿಸುವುದು ಜೀವನ ಬರಿ ಜೊಂಡು ಎಲ್ಲವನ್ನು ತೊರೆದೋಗಲು ನಾವು ಬುದ್ದರಲ್ಲ ನಾವಿನ್ನೂ ಅಷ್ಟೊಂದು ಪ್ರಬುದ್ದರಲ್ಲ ಓಡೋಡೊಡಿ ಸಾಗಿರುವೆವು ನಿಲ್ಲುವವರಲ್ಲ
----------------------------------
ನೋಂದಣಿ ಐಡಿ : KPF-S1-6190
