Submission 23944

ಅರೆಪ್ರಕಟಿತ ಕವಿತೆ ಅವಳು

ರಚನೆ : ರೀಹಾನಬೇಗಂ ಬಿ ನದಾಫ

----------------------------------

ಅರೆಪ್ರಕಟಿತ ಕವಿತೆ ಅವಳು ಚಿಗುರಿದ ಮೊಗ್ಗು ಹೂವಾಗಿ ಅರಳದಂತಿರುವಳವಳು ಸಂಸ್ಕೃತಿ, ಮರ್ಯಾದೆಯನ್ನು ಸೆರಗ ಅಂಚಿನಲ್ಲಿ ಕಟ್ಟಿಕೊಂಡು ಸಂಪ್ರದಾಯವನ್ನು ಹಸಿ ಗೋಡೆಯ ಮೇಲೆ ಭದ್ರವಾಗಿ ಕಾಪಾಡಿಕೊಂಡು ಪರಂಪರೆ, ಸಂಸ್ಕೃತಿಯ ಪ್ರತೀಕ ಅವಳು! ತನಗಾಗುವ ನೋವನ್ನು ಸಮಾಜಕ್ಕೆ ಹೆದರಿ ತನ್ನಲ್ಲೇ ಅದುಮಿಟ್ಟವಳು ಅವಳು ; ತನ್ನೆಲ್ಲ ನೋವನ್ನು ಕಾಗದದಲ್ಲಿ ಗೀಚಿರುವಳು, ಶಾಯಿ ಅವಳಾದರೆ ಲೇಖನಿ ಮತ್ತಿನ್ಯರದ್ದೋ!!

----------------------------------

ನೋಂದಣಿ ಐಡಿ : KPF-S1-6199

0
Total Votes
3
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!