Submission 23896

ಗಜಲ್

ರಚನೆ : ಶಂಕರರಾವ ಉಭಾಳೆ ದೇವದುರ್ಗ

----------------------------------

ಗಲ್ಲಕೆ ಕೈಯಿಟ್ಟು ಮುಡಿಯೇರಿದ ಮುಂಗುರುಳಲಿ ಮಂದಹಾಸ ಬೀರಿ ಸೆಳೆದದ್ದು ಈಗ ನೆನಪು ಮಾತ್ರ ಮಿಂಚುಗಣ್ಣಲಿ ಕರೆದು ಒಲವ ಧಾರೆ ಹರಿಸಿ ಭರವಸೆಯ ಹಾದಿ ಬನವಾಗಿದ್ದು ಈಗ ನೆನಪು ಮಾತ್ರ ಬಾಳ ತೋಟದಲಿ ಹೂ ದುಂಬಿಯಂತಾಗಿ ಅರಳಿ ಸುಂದರಕಾಂಡದ ಬದುಕು ಈಗ ನೆನಪು ಮಾತ್ರ ಹಗಲಿರುಳ ನೆರಳಲಿ ಟಿಸಿಲೊಡೆದ ಟೊಂಗೆಯಲಿ ಆನಿಸಿ ಬಾಳುತಲೆ ದೂರದದ್ದು ಈಗ ನೆನಪು ಮಾತ್ರ ಹಿಡಿದ ಕೈ ನೋವಲಿ ಬಿಡಿಸಿಕೊಂಡ ಘಳಿಗೆಯಲಿ ಶಂಕರನ ಹೃದಯ ಅದುರಿದ್ದು ಈಗ ನೆನಪು ಮಾತ್ರ

----------------------------------

ನೋಂದಣಿ ಐಡಿ : KPF-S1-6195

1
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!