ಈ ಸಲಾ ಕಪ್ ನಮ್ಮದೇ
ರಚನೆ : ಲೋಕೇಶ ಮೇತ್ರೆ
----------------------------------
ಬರೆದಿಟ್ಟುಕೊಳ್ಳಿ ಈ ಸಲಾ ಕಪ್ ನಮ್ದೇ ಅದಕ್ಕೆ ಬೇಕಿಲ್ಲ ಯಾರದೂ ಒಪ್ಪಿಗೆ.. RCB ಹೊಂದಿದೆ ವಿರಾಟ ವೇಷಾದ ಕಲಿ ಎದುರಾಳಿಯಲ್ಲಿ ಹೆಚ್ಚಿತೋ ಸೋಲಿನ ಚಳಿ ಇದರಿಂದ ಹೆಚ್ಚಿತು ಆರ್‌ಸಿಬಿಯ ಮನೋಬಲ ಅಭಿಮಾನಿಗಳಲ್ಲಿ ಮೂಡಿತು ಕಪ್ ನ ಛಲ.. ಸಾಕ್ಷಿ ಬೇಕಿದ್ದರೆ ನೋಡಿ ನಮ್ಮ ಹೋರಾಟದ ಆಟ ಇಲ್ಲಾಂದ್ರೆ ತಿರುವಿ ನೋಡಿ RCB ಇತಿಹಾಸದ ಒಂದೊಂದು ಪುಟ ನಮ್ಮ ತಂಡದಲ್ಲಿ ಯಾವತ್ತೂ ಇರಲಿಲ್ಲ FIXER ಬರೀ ಇದ್ದರೂ ಬೌಂಡರಿ ಹೊಡೆಯುವ SIXER ಅವರೇ ನಮ್ಮ ಹೆಮ್ಮೆಯ ABD, ಕೊಹ್ಲಿ, ಗೈಲ್ ಇವರ ಆಟಕ್ಕೆ ಅಳೆಯಲು ಬೇಕಿತ್ತು ಸ್ಕೇಲ್. ಫಿಕ್ಸಿಂಗ್ ಇಂದ ನಮ್ಮ ಮೇಲೆ ಆಗಲಿಲ್ಲ ಕೇಸ್ ಸೋತ್ತರು ಕಡಿಮೆ ಆಗಲಿಲ್ಲ RCBಯ ಜೋಷ್.. ಕೊಹ್ಲಿ ಉಡುತ್ತಾರೆ ಜರ್ಸಿ ನಂಬರ್18, RCB cup ಗೆಲ್ಲುತ್ತಾರೆ ಎಡಿಷನ್ ನಂಬರ್ 18 ಈ ಸಲಾ ಕಪ್ ನಮ್ದೇ...
----------------------------------
ನೋಂದಣಿ ಐಡಿ : KPF-S1-6205
