ಲೋಕದ ನಂಟು
ರಚನೆ : ಅರ್ಚನಾ ನಾಮದಿ
----------------------------------
ಬಾನು ಭೂವಿಗೂ ಕೊನೆಯಿಲ್ಲದ ನಂಟು ರವಿ ಶಶಿಗೂ ಬೆಳಕಿನ ನಂಟು ಮರಕ್ಕೂ ಹಕ್ಕಿಗೂ ಗೂಡಿನ ನಂಟು ಕಮಲಕ್ಕೂ ಕೆಸರಿಗೂ ಹುಟ್ಟಿನ ನಂಟು. ಹಸರಿಗೂ ಉಸಿರಿಗು ಜೀವದ ನಂಟು ಜೀವ ಜಾಲಕ್ಕೂ ಬದುಕಿನ ನಂಟು ಕವಿ ಕೃತಿಗೂ ಭಾವದ ನಂಟು ಕಲ್ಲಿಗೂ ಶೀಲೆಗೂ ಕಲೆಯ ನಂಟು. ನದಿ ಸಾಗರಕ್ಕು ನಿರಂತರತೆಯ ನಂಟು ಮೋಡ ಮಳೆಗೂ ಒಲುಮೆಯ ನಂಟು ಗಾಳಿ ಗಂಧಕ್ಕೂ ವಿಸರಣದ ನಂಟು ವಸಂತ ಮರಗಳಿಗೂ ಋತುವಿನ ನಂಟು. ಇದೆ ಲೋಕದ ಗುಟ್ಟು ಬದುಕಲು ಬೇಕು ಪ್ರೀತಿಯ ಗಂಟು.
----------------------------------
ನೋಂದಣಿ ಐಡಿ : KPF-S1-6227
