ಎಡವಿ ಪಡೆದದ್ದು
ರಚನೆ : ಮೋನಿಕಾ
----------------------------------
ಏನೋ ಒಂದು ವಿಶೇಷವಾದ ಭಾವ ಮುದುಡಿದ ತಾವರೆ ಅರಳೀ, ಸೂರ್ಯನ ಬೆಳಕಿಗೆ ಮೈ ಒಡ್ಡಿದಂತೆ ಹಾರಲು ಬರದ ಹಕ್ಕಿಗೆ ಆಸರೆ ಸಿಕ್ಕಿ, ಗರಿಬಿಚ್ಚಿ ಮುಗಿಲಿನಲ್ಲಿ ಹಾರಿದಂತೆ, ಶೀತಕಾಲಕ್ಕೆ ಕಳೆದುಕೊಂಡ ಎಲೆಗಳನ್ನು ಮರ, ವಸಂತಕ್ಕೆ ಮರಳಿ ಪಡೆದಂತೆ ಜನಜಂಗುಳಿಯಲ್ಲಿ ಕಳೆದು ಹೋದ ಮಗುವಿಗೆ, ತನ್ನಮ್ಮ ಸಿಕ್ಕಿ ಮತ್ತೆ ಮುದ್ದಾಡಿದಂತೆ ವಂಚನೆಗೆ ಸಿಕ್ಕಿ ಸೋತ ಮನಕ್ಕೆ ಮತ್ತೆ, ಪ್ರೀತಿಯ ವರ್ಷಧಾರೆ ಸುರಿದಂತೆ ಗೆಳೆಯಾ...ಸದಾ ನಿನ್ನೆದೆಯ ಪ್ರೀತಿಯ ಹೂವನ್ನು ಸುರಿಸು, ನನ್ನೊಳಗಿನ ನಗುವಿನ ಹೂವನ್ನು ನಿನನಗಾಗಿ ಕಾಯ್ದಿರಿಸುವೆ.
----------------------------------
ನೋಂದಣಿ ಐಡಿ : KPF-S1-6186
