Submission 23388

ಈ ಜಗದ ಶಾಲೆ

ರಚನೆ : ಹನುಮೇಗೌಡ

----------------------------------

ಏನು ಮಾಯೆ ಏನು ಲೀಲೆ ಜಂಗಮವಾಣಿ ಈ ಜಗದ ಶಾಲೆ IಪI ಇಂದುವಿನ ಕಥೆಯ ಹೇಳಿ ಅಂಬಲಿ ಸವಿಯ ನೀಡುವ ಮಾತೃ ಪ್ರೇಮವಿಲ್ಲದೆ ಶಿಶುವಿನ ಪರಿಸ್ಥಿತಿ ಅನಾಥವಾಗಿದೆ IಪI ತಂದೆ -ತಾಯಿ, ಬಂಧು - ಬಳಗ, ಗುರುವಿನ ಒಲವಿಗೆ ಮೌಲ್ಯವಿಲ್ಲ ಹೊಲಗದ್ದೆ ಊರುಕೇರಿ ಮನೆಮಠ ಬಯಲು ಸೀಮೆಯೆಲ್ಲ ಕಡೆಯೂ ಜಂಗಮವಾಣಿಯೇ ಈ ಜಗದ ಶಾಲೆ IಪI ಶಿಶುವಿನ ಸಾಧನೆಯೆಂಬ ಪ್ರಭುತ್ವ ಕಳೆದು ನಿದ್ದೆ ಓದು ತಿಂಡಿ ತಿನಿಸು ಎಲ್ಲ ಕಳೆಯುವ ಶಿಶುವಿನ ಬದುಕೇ ಜಂಗಮವಾಣಿಯ ಲೀಲೆಯಾಗಿದೆ IಪI

----------------------------------

ನೋಂದಣಿ ಐಡಿ : KPF-S1-6169

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!