ಹೆಣ್ಣೆಂದರೆ ಹಾಗೇನೆ
ರಚನೆ : ಚಂದ್ರಪ್ಪ ಬಾರಂಗಿ
----------------------------------
ಕರುಳು ಬಳ್ಳಿ ರಕ್ತ ನೀಡಿ ಹೊತ್ತು ಹೆತ್ತು ಸಾಕಿದವಳು ತಾನೇ ಮತ್ತೆ ಹುಟ್ಟಿಬಂದ ಭಾವವನ್ನು ಪಡೆದರೂನು ಮಕ್ಕಳೆಲ್ಲ ಕೊಟ್ಟ ಕಾಟ ಸಹಿಸಿಕೊಂಡ ಸಹನಾಮೂರ್ತಿ ಹೆಣ್ಣೆಂದರೆ ಹಾಗೇನೆ. ||೧|| ತನ್ನ ನೋವ ಮರೆತು ಎಲ್ಲ ಅನ್ನ ಕೊಡುವ ಗುಣದವಳು ತನ್ನ ನಲಿವ ಬದಿಗೆಯೊತ್ತಿ ಬಳಗಕೆಲ್ಲ ಬೆಳಕುಕೊಟ್ಟ ತನ್ನ ತಾನೇ ಕರಗಿಕೊಳುವ ಮೇಣದಂತ ಮನಸಿನವಳು ಹೆಣ್ಣೆಂದರೆ ಹಾಗೇನೆ. ||೨|| ಮನೆಯ ಒಳಗು ಹೊರಗೂ ದುಡಿದು ದಣಿದಣಿದು ಇದ್ದರೂನು ಮೊದಲುಗಂಡ ಮಕ್ಕಳೆಲ್ಲ ತಿಂದು ಉಂಡು ಬಳಿಕವೆಲ್ಲ ಇದ್ದರುಂಡು ಮೆರೆವ ಭಾವ ಎಲ್ಲ ಕೊಡುವ ಧರಿತ್ರಿಯವಳು ಹೆಣ್ಣೆಂದರೆ ಹಾಗೇನೆ. ||೩|| ಅಜ್ಜಿ ಅವ್ವ ಅಕ್ಕ ಅತ್ತೆ ತಂಗಿ ತಾಯಿ ಹೆಣ್ಣ ರೂಪ ಏಳುಬೀಳು ಕಂಡರೂನು ಬೀಗುಬಿಟ್ಟು ಭಾಗಿ ನಡೆವ ಜಗದ ಕಣ್ಣು ಹೆಣ್ಣು ಎಂದು ಹೊಗಳಿಕೆಗೆ ಪಾತ್ರಳವಳು ಹೆಣ್ಣೆಂದರೆ ಹಾಗೇನೆ. ||೪||
----------------------------------
ನೋಂದಣಿ ಐಡಿ : KPF-S1-6237
