Submission 23244

ನನ್ನೆತ್ತವಳು ಕಲಿಯುಗದ ಕಾಮಧೇನು

ರಚನೆ : ಹೇಮರಾಜ್ ಕಲಾ ಪ್ರಿಯಾ ಬೇಲೂರು

----------------------------------

ಒಂಭತ್ತು ತಿಂಗಳು ಹೊತ್ತು ಹೆತ್ತು ಸಾಕಿದವಳು, ಒಪ್ಪೊತ್ತುಂಡು; ಗಂಜಿಕುಡಿದರು ಕಿಮ್ಮತ್ತಿಲ್ಲದೆ ಬೆಳೆಸಿದವಳು. ಅಪ್ಪನ ಜೇಬಿನ ಕಾಸನು ಕಾಣದೆ ಕೂಡಿಟ್ಟವಳು ಎಲ್ಲರಂತೆ ಮಗನಿಗೂ ಹಬ್ಬಕೆ ಬಣ್ಣ ಬಣ್ಣದ ವಸ್ತ್ರವ ಕೊಡಿಸಲು ಎಂದು. ನನ್ನಂತಾಗದಿರಲಿ ಎಂದು ನಮ್ಮೂರ ಶಾಲೆಗೆ ಸೇರಿಸಿದಾಕೆ ಇನ್ನು ಏನಾರ ಬೇಕೆ ಅವ್ವ ಎಂದರೆ ಸಾಕೆ. ಏನ ಹೇಳಲಿ ಜಾಣ ನನ್ನೆತ್ತವಳು ಕಲಿಯುಗದ ಕಾಮಧೇನು ಕಾಣ.

----------------------------------

ನೋಂದಣಿ ಐಡಿ : KPF-S1-6170

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!