Submission 23222

ನನ್ನವ್ವ..!

ರಚನೆ : ರಿಯಾನಬಾನು ಜೆ ದೊಡ್ಡಮನಿ

----------------------------------

ಪದಗಳಲ್ಲಿ ವರ್ಣಿಸಕ ಆಗ್ದೇ ಇರಾಕಿ.! ನನ್ ಜೀವಕ್ಕ ಜೀವ ಆದಾಕಿ.! ಸದಾ ನನ್ನ ಆಗುಹೋಗುಗಳ ಜೊತೆ ನಿಂತಾಕಿ..! ಸಾವಿರ ಜನ ಸಾವಿರ ಮಾತಾಡಿದ್ರು ನನ್ ಮಗಳು ಅಂತೋಳಲ್ಲ ಅನ್ನಾಕಿ.! ನನ್ನ ನಗುವಲ್ಲೇ ತನ್ನ ನೋವು ಮರೆಯಾಕಿ..! ಊಟ ಮಾಡಿಲ್ಲ ಅಂದ್ರ ತುತ್ತು ಮಾಡಿ ತಿನ್ಸಾಕಿ.! ಎಲ್ಲಿಗಾದ್ರೂ ಅಲಂಕಾರ ಮಾಡ್ಕೊಂಡು ಹೊಂಟ್ರ ಬಾಯಿ ಮೇಲೆ ಬೆರಳಿಟ್ಕೊಂಡು ನೋಡೋಕಿ.! ಬಂದ ಮ್ಯಾಲ ದೃಷ್ಟಿ ತಗಿಯಾಕಿ.! ಮಗಳು ಮದ್ವಿ ವಯಸ್ಸಿಗೆ ಬಂದಾಳ ಅಂತಾ ಚಿಂತಿ ಮಾಡಾಕಿ.! ನನ್ನ ಅವ್ವ ಮಾಡೋದನ್ನ ನೆಂಸ್ಕೊಂಡ್ರ ಬಾಳ ನಗು ಬರತೈತ್ರಿ.! ಆದ್ರೂ ಅವ್ಳ ಋಣ ತೀರ್ಸಾಕ ಆಗಲ್ಲ ಅನ್ನೋ ಕೊರಗು ನನ್ನ ಬಾಳ ಕಾಡ್ತೈತ್ರಿ..!

----------------------------------

ನೋಂದಣಿ ಐಡಿ : KPF-S1-6152

0
Total Votes
3
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!