ಕವಿತೆಯ ಸ್ಫೂರ್ತಿ ಅವಳು
ರಚನೆ : ಹೇಮಂತ್ ಬಸಪ್ಪನದೊಡ್ಡಿ
----------------------------------
ಅವನೂರಿನ ಸೂರ್ಯ ನನ್ನೂರಿಗೆ ಬೆಳಕು. ನನ್ನೂರಿನ ಚಂದ್ರ ಅವನೂರಿಗೆ ಬೆಳದಿಂಗಳ ಒಳಪು. ಅವನುರಿನ ಗಾಳಿ ನನ್ನೂರಿಗೆ ತಂಪು ನನ್ನೂರಿನ ಕೋಗಿಲೆ ದನಿ ಅವನೂರಿಗೆ ಇಂಪು. ಅವನೂರಿನ ಕೆರೆಕಟ್ಟೆಯ ನೀರು. ನನ್ನೂರಿನ ಬಾಯಾರಿಕೆ ನೀಗಿಸುವ ಸಿಹಿ ನೀರು. ಅವನೂರಿನ ಭೂ ತಾಯಿ ಮನಸ್ಸಿನ ಹೆಣ್ಣು. ನನ್ನೂರಿನ ಭೂಮಿ ತೂಕದ ಗಂಡು. ಇಬ್ಬರಿಗೂ ನಾವೇ ನಿರ್ಮಿಸಿದ ಪ್ರೇಮ ವೇದಿಕೆಯಲ್ಲಿ ಹರಸುವ ಆದರ್ಶ ಸತಿಪತಿ ನಾವು.
----------------------------------
ನೋಂದಣಿ ಐಡಿ : KPF-S1-6224
