ತಾಯಿಗಿಂತ ದೇವರಿಲ್ಲ
ರಚನೆ : ಸುನಂದಾ ಪುರಾಣಿಕ
----------------------------------
ಅಮ್ಮನೆಂದರೆ ಅಕ್ಕರೆ ಮಮತೆಯು ಭಾವನೆಗೆ ಸ್ಪಂದಿಸೋ ದೇವತೆಯು ಪ್ರೀತಿ ಆಗಸ ,ತಾಳ್ಮೆ ಭೂಮಿಯು ಅಮ್ಮನಿಗೆ ಯಾರಿಲ್ಲ ಸರಿಸಾಟಿಯು| ತನಗೇನನ್ನು ಬಯಸದೆ ಇರುವವಳು ತನ್ನವರಿಗಾಗಿ ಜೀವ ಸವೆಸುವಳು ಮಕ್ಕಳ ಸುಖನೆಮ್ಮದಿ ಬಯಸುವಳು ಬೆನ್ನು ಬಾಗುವವರೆಗೂ ದುಡಿಯುವಳು| ಅಮ್ಮನು ತಿನಿಸುವ ಕೈತುತ್ತು ಮಾತೃ ವಾತ್ಸಲ್ಯದಿ ಕೊಡುವ ಮುತ್ತು ಎಲ್ಲದಕ್ಕೂ ಮೀರಿದ ಸಂಪತ್ತು ಸ್ವಾರ್ಥವೆಂಬುದೇ ಇಲ್ಲ ಕಿಂಚಿತ್ತೂ| ಅಮ್ಮನೇ ದೇವರು ನಮಗೆಲ್ಲ ಅವಳಿಗಿಂತ ದೊಡ್ಡ ದೇವರಿಲ್ಲ||
----------------------------------
ನೋಂದಣಿ ಐಡಿ : KPF-S1-6148
