Submission 23190

ನೆನಪ ತೊರೆಯಲ್ಲಿ

ರಚನೆ : ಉಮೇಶ ಜಿ ವಾಲ್ಮೀಕಿ

----------------------------------

ತೇಲಿ ತೇಲಿ ಬರುತಲಿವ ಭಾವ ಕರಗಿ ಪೂರ. ಸ್ನೇಹ ಸಾಗರ ನೆನಪ ತೊರೆಯಲ್ಲಿ ತೇಲಿ ಸಾಗಿವೆ ದೂರಾ. ಹೃದಯ ಕಂಪನಕ್ಕೆ ಭಾವ ಉಕ್ಕಿ ಹರಿದಂತೆ ಸಾಗರ. ಸಿಹಿ ಕಹಿಗಳು ಓಡಿವೆ ಅಲೆ ಅಲೆದು ಆಚೆ ತೀರ. ನೆನೆದ ಕ್ಷಣ ಕ್ಷಣಗಳು ನೆನೆದಷ್ಟು ಮಧುರ. ನೆನಪ ತೊರೆಯಲ್ಲಿ ತೇಲುವದೆ ಸುಮಧುರ. ದಶಕಗಳ ಸ್ನೇಹ ಸಾಮ್ರಾಜ್ಯ ಬಾರಿಸಲಿ ಶತ ಶತಕ. ಅವಸಾನದಿ ಬರಲಿ, ಮರು ಜನ್ಮದ ತನಕ .

----------------------------------

ನೋಂದಣಿ ಐಡಿ : KPF-S1-6222

0
Total Votes
6
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!