ಬದುಕೆಂಬ ಸವಾರಿ
ರಚನೆ : ಹನಮಂತ ಕುರಿ
----------------------------------
ಆಸೆಯೆಂಬ ಕುದುರೆ ಏರಿ ಕಾಣಾದಾಗಿದೆ ಬದುಕಿನ ದಾರಿ ಕೊಂಕು ನಗೆಯ ಬೀರಿ ನಡೆಯುತ್ತಿದೆ ಬದುಕಿನ ಸವಾರಿ // ಸತ್ಯಕ್ಕೆ ಕಟ್ಟಿದಿ ನೀ ಗೋರಿ ಮಮತೆಯ ಸ್ವಾರ್ಥಕೆ ನೀ ಮಾರಿ ನನ್ನದೆಂದು ಡಂಗುರ ಸಾರಿ ನಡೆಯುತ್ತಿದೆ ಬದುಕಿನ ಸವಾರಿ // ಬದುಕೆಲ್ಲ ವಿಷವಾ ಕಾರಿ ಪ್ರೀತಿಯ ಗಾಳಿಗೆ ತೂರಿ ಮಿಥ್ಯಾ ಕಡೆ ಮನವ ತೋರಿ ನಡೆಯುತ್ತಿದೆ ಬದುಕಿನ ಸವಾರಿ //
----------------------------------
ನೋಂದಣಿ ಐಡಿ : KPF-S1-6214
