Submission 23169

ರೈತ

ರಚನೆ : ಅಸದುಲ್ಲ ಬೇಗ್

----------------------------------

ಕೇಳಿ ನೋಡಿ,ರೈತನೆಂದರೆ ಯಾರು? ಎಲ್ಲ ನಾನು ನಾನು ಎನ್ನುವರು! ಉಳುವುದಿಲ್ಲ, ಬಿತ್ತುವುದಿಲ್ಲ ಆಕಾಶ ನೋಡುತ್ತ ಕೂರುವುದಿಲ್ಲ; ಬೆವರು ಹರಿಸದೆ ಅನ್ನುವರು ನಾನು ರೈತ!. ರಾಜಕಾರಣಿ, ಪುಂಡ, ಲಂಚಕೋರ ಅವರಿವರ ಆಸ್ತಿ ಕಬಳಿಸಿ ಲೆಕ್ಕ ಕೊಡಲಾಗದವ ರೈತನೇ? ಆದಾಯ ತೋರಿಸಿ ನಿಯತ್ತಿನಿಂದ ತೆರಿಗೆ ಕಟ್ಟಲಾರದವ ರೈತನೇ? ಪಾಪ.. ಹೊಟ್ಟೆ ಬೆನ್ನಿಗಂಟಿಸಿಕೊಂಡು ತುತ್ತು ತಿಂದು.. ತುತ್ತು ಹಂಚುವ ನೆಗಿಲಯೋಗಿ ಒಮ್ಮೆಯಾದರು ಅನ್ನುವಂತಾಗಲಿ ನಾನು ರೈತ ಅವನೇ.. ಆಳುವಂತಾಗಲಿ ಭಾರತ!.

----------------------------------

ನೋಂದಣಿ ಐಡಿ : KPF-S1-6203

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!