ಅಮ್ಮನ ಕೈ ತುತ್ತು
ರಚನೆ : ಯಲ್ಲಪ್ಪಗೌಡ ಲಿಂಗನಗೌಡ್ರ
----------------------------------
ಅಮ್ಮನ ಮಮತೆಯ ಕೈತುತ್ತು ಎಂದಿಗೂ ಸಿಗದ ಸಂಪತ್ತು ಹೇಗೆ ಹೇಳಲಿ ಇದರ ಗಮತ್ತು ಬಣ್ಣಿಸಲಾಗದು ಯಾವತ್ತು ಪ್ರೀತಿ ಅಕ್ಕರೆ ಅದರಲಿ ತುಂಬಿರಲು ಏಳು ಜನ್ಮಗಳು ಸಾಲದು ಅದ ತೀರಿಸಲು ದೇವರು ಹರಿಸಲಿ ಜೊತೆಗಿರಲು ಅವಳೆ ನಮಗೆ ಎಲ್ಲವೂ ಹಗಲಿರುಳು ಅವಳ ಮಾತೆ ನಮಗೆ ವೇದವಾಕ್ಯ ಮಾಡದೆ ಬಿಡಳು ನಮ್ಮನು ಚಾಣಕ್ಯ ಅವಳ ಋಣ ತೀರಿಸುವದು ಅತಿ ಮುಖ್ಯ ಜೋಪಾನ ಕಾಪಾಡಿಕೊ ತಾಯಿಎಂಬ ಮಾಣಿಕ್ಯ
----------------------------------
ನೋಂದಣಿ ಐಡಿ : KPF-S1-6191
