Submission 23070

ಸಂಕಟದ ಅರಿವು

ರಚನೆ : ಚಂದ್ರಶೇಖರ ಅಕ್ಕಿ

----------------------------------

ಸಂಕಟದ ಅರಿವು ಏಂತಾ ಬಿಸಿಲು ಸುಡುವ ಬಿಸಿಲು ಮೋಡಗಳೆ ಇಲ್ಲದ ಬಿಸಿಲು ತುಸು ಗಾಳಿ ಇರದ ಬಿಸಿಲು ಬೆಳಗಾದರೆ ಸಾಕು ಬಿಸಿಲು.. ಜನರು ಮಾತ್ರ ಮನೆಯೊಳಗೆ ರಾತ್ರಿ ತುಸುನಿದ್ದೆಯಿಲ್ಲ ಕಣ್ಣಿಗೆ ಬಿಸಿಲಿನ ತಾಪವು ಕಾದಿದೆ ಮನೆಗೆ ಜಳ ಜಳ ಆಗಿದೆ ಮೈಯಿಗೆ ಸಾಕೆನಿಸಿದೆ ಜೀವನದ ಬಂಡಿಗೆ.. ಬೇಗನೆ ಬಾರೋ ಮಳೆರಾಯ ಭೂಮಿಯನ್ನು ತಣ್ಣಗೆ ಮಾಡಯ್ಯ ಈಗ ಶಾಖದ ಗಾಳಿ ಬೇಕಯ್ಯ ಬೆಳೆಯು ಎಲ್ಲಿಯೂ ಕಾಣದಯ್ಯ ಜಗಕೆ ಹರುಷವ ತಾರಯ್ಯ.. ಕಾಡುಗಳನ್ನು ಯಾರು ಉಳಿಸುವುದಿಲ್ಲ ಮರ ಗಿಡಗಳನ್ನು ಯಾರು ಬೆಳೆಸುವುದಿಲ್ಲ ಎಲ್ಲಿ ಹೋದರೂ ನೆರಳು ಸಿಗುವುದಿಲ್ಲ ನೀರು ಪಾತಾಳಕ್ಕೆ ಹೋಯಿತಲ್ಲ ಕುಡಿಯಲು ಹನಿ ನೀರು ಇಲ್ಲಾ.. ಈಗಲಾದರೂ ಕಾಡನ್ನು ಬೆಳೆಸೋಣ ನೆಮ್ಮದಿಯ ಬದುಕನ್ನು ಕಟ್ಟೋಣ ಮುಂದಿನ ಮಕ್ಕಳನ್ನು ಬದುಕಿಸೋಣ ಇಡೀ ಮಾನವ ಕುಲವನ್ನು ಉಳಿಸೋಣ...

----------------------------------

ನೋಂದಣಿ ಐಡಿ : KPF-S1-6201

24
Total Votes
172
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!