ದೀಪದ ಬೆಳಕು - ನನ್ನ ಬದುಕು
ರಚನೆ : ಬಸವೇಶ. ಎಸ್
----------------------------------
ಕತ್ತಲೆ ತುಂಬಿದ ಮನೆಯೊಳಗೆ ಎಲ್ಲಿ ಬೆಳಕು ನೋಡುಗರ ದೃಷ್ಟಿ ಯಲ್ಲಿ ನಾನಾಗಿರುವೆ ಕೊಳಕು ನಿಮಗೇಗೆ ತಿಳಿಯುತ್ತಿಲ್ಲ ನನ್ನ ಸ್ವಂತ ಬದುಕು ಸುಖದ ಹಾದಿಯಲ್ಲಿ ಮಾತ್ರ ನಾನು ನಿಮಗೆ ಬೇಕು ದುಃಖದಲ್ಲಿ ನೊಂದ ಮನಕ್ಕೆ ನನ್ನ ಕಣ್ಣೀರು ಸಾಕು ಎಲ್ಲವನ್ನು ಮರೆತು ಹೊಟ್ಟೆ ತುಂಬಿಸಲೇ ಬೇಕು ಬೇರೆ ದಾರಿ ಕಾಣದೇ ನಾನಾಗಿರುವೆ ಕೊಳಕು ನನ್ನದು ಒಂದು ಜೀವ ಬದುಕಲು ಬಿಡಿ ಸಾಕು ಬಾಲ್ಯದಲ್ಲಿ ಕಂಡ ಕನಸು ಅರ್ಥದಲ್ಲೇ ಮುರುಕು ಬುದ್ದಿ ಬರುವ ಹೊತ್ತಿಗೆ ನನ್ನದು ಅನಾಥೆ ಬದುಕು ಒಂದು ಸುತ್ತು ಮಲ್ಲಿಗೆ ಹೂವು ಮುಡಿಗೆ ಸಾಕು ಅದರಿಂದಲ್ಲೇ ಶುರುವಾಯಿತು ನನ್ನ ಬದುಕು ಕೊನೆಗೂ ಕಾಣಲಿಲ್ಲ ಕತ್ತಲೆಯಲ್ಲಿ ಶುದ್ಧ ಬೆಳಕು ಕೊನೆಯುಸಿರೆಳೆದಾಗ ಕಂಡಿತು ದೀಪದ ಬೆಳಕು
----------------------------------
ನೋಂದಣಿ ಐಡಿ : KPF-S1-6200
