ಸ್ವರ ಸಂದೇಶ
ರಚನೆ : ರಾಜಶೇಖರ
----------------------------------
ಅಕ್ಕರೆಯಿಂದ ಅಕ್ಷರ ಕಲಿಯೋಣ ಆನಂದದಿಂದ ಪುಸ್ತಕ ಓದೋಣ ಇಚ್ಚೆಯಿಂದ ಅರ್ಥವ ತಿಳಿಯೋಣ ಈಶ್ವರ ಸೃಷ್ಟಿಯ ಮಹತ್ವ ಅರಿಯೋಣ ಉಸಿರಿರೋವರೆಗೂ ಕನ್ನಡ ನುಡಿಯೋಣ ಊರೂರಲ್ಲಿ ಕನ್ನಡ ಬೆಳೆಸೋಣ ಋಜುಮಾರ್ಗದಿಂದ ನಾಡನ್ನು ಕಟ್ಟೋಣ ಎಲ್ಲಿದ್ದರು ಕನ್ನಡತನ ಮೆರೆಯೋಣ ಏಳಿಗೆಗಾಗಿ ಎಲ್ಲರೂ ಶ್ರಮಿಸೋಣ ಐಕತ್ಯೆಯಿಂದ ನಾವೆಲ್ಲರೂ ಬಾಳೋಣ ಒಲುಮೆಯ ಸಾಹಿತ್ಯದ ಸಾರ ತಿಳಿಸೋಣ ಓದುತ್ತಾ ಜೀವನ ಸಾರ್ಥಕ ಮಾಡಿಕೊಳ್ಳೋಣ ಔದಾರ್ಯದಿಂದ ಘನತೆಯನ್ನು ಹೆಚ್ಚಿಸೋಣ ಅಂತಃಕರಣದಿಂದ ಮನುಕುಲವನ್ನು ಪ್ರೀತಿಸೋಣ
----------------------------------
ನೋಂದಣಿ ಐಡಿ : KPF-S1-6197
