Submission 23006

ಬದುಕು ಬಂದಂತೆ

ರಚನೆ : ಕವಿತಾ ಎಲ್ ಸಿ

----------------------------------

ಬದುಕು ನೀ ಅಂದುಕೊಂಡಂತೆ ಅಲ್ಲ, ಸ್ವೀಕರಿಸು ಈ ಬದುಕ ಬಂದಂತೆ, ಉಸಿರು ಕಟ್ಟಿಸಿ ನಿಟ್ಟುಸಿರು ಬಿಟ್ಟಂತೆ , ನೆನಪಿರಲಿ ಈ ಬದುಕಲ್ಲಿ ಆಗುವುದೆಲ್ಲ ಬರಿ ನೀ ಅಂದುಕೊಳ್ಳದಂತೆ, ಬಯಸಿ ಹೋದರೆ ಸಿಗದ ನಕ್ಷತ್ರದಂತೆ, ಕಾಲ ಕಳೆದರೆ ಶೂನ್ಯವಾಗಿ ನಿಂತಲ್ಲೆ ನಿಂತಂತೆ, ನೆನೆದು ಕೊರಗಿದರೆ ನೆನ್ನೆಯದೆಲ್ಲ ನೋವಂತೆ, ನೋವ ಬಿಟ್ಟರೆ ಎಲ್ಲವೂ ಪಾಠವಂತೆ, ಬರೆದರೆ ಕಥೆಯಂತೆ, ಬರೆಯದೇ ಬಿಟ್ಟರೆ ಕಾಲಿ ಹಾಳೆಯಂತೆ, ಕಷ್ಟ ಪಟ್ಟರೇ ಇಲ್ಲಿ ಫಲವಂತೆ , ಆ ದೈವವೇ ನಮಗೆ ಬಲವಂತೆ, ಬಯಸದೆ ಬಂದದ್ದು ಸ್ವೀಕರಿಸಿದರೆ ಬದುಕೆ ಒಂದು ಬೆಳೆಯಂತೆ, ಇಲ್ಲವಾದರೆ ಆ ಬೆಳೆಯಲ್ಲಿನ ಕಳೆಯಂತೆ, ಸ್ವೀಕರಿಸು ಬದುಕ ಬಂದಂತೆ,

----------------------------------

ನೋಂದಣಿ ಐಡಿ : KPF-S1-6177

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!