ನಿತ್ಯೋತ್ಸವ
ರಚನೆ : ವಿಜಯಾಪದ್ಮಶಾಲಿ
----------------------------------
ಅಕ್ಕರೆಯ ಕನ್ನಡದಿ ಸಕ್ಕರೆಯ ಸವಿಯಿಹುದು ಮಿಕ್ಕ ಭಾಷೆಗಳಲಿದು ಮೇರುಭಾಷೆ || ನಕ್ಕ ನಗುವಿನೊಳಗೂ ಫಕ್ಕನೇ ಪ್ರತಿಧನಿಸಿ ದಿಕ್ಕುಗಳೆಡೆಗೆ ಪಸರೊ ಹೃದಯಭಾಷೆ || ಇಳೆಯ ಮೇಲಣ ಸಗ್ಗ ಚೆಲುವ ಕನ್ನಡ ನಾಡು ಕಲೆಗಳಾ ತವರೂರು ನನ್ನನಾಡು || ಒಲವನೇ ಬಿತ್ತುತಲಿ ನಲಿವುದುಂಬುತ ಮನದಿ ಹಲಧರ್ಮ ಸಲಹುತಿಹ ಹೊನ್ನಬೀಡು || ಎಲ್ಲರೊಳಗೇಕತೆಯ ಮೆಲ್ಲನೇ ಮೂಡಿಸುತ ಚಲ್ಲಿಹಳು ನಸುನಗೆಯ ಭುವನೇಶ್ವರಿ || ಕಲ್ಲಿನಾ ಶಿಲೆಯೊಳಗು ಬಲ್ಲಿದನ ಕಲೆಯೊಳಗು ಗೆಲ್ಲುವಸ್ಮಿತೆಯಿವಳು ರಾಜೇಶ್ವರಿ || ಕನ್ನಡದ ಹಬ್ಬವಿದು ಹೊನ್ನುಡಿಯ ತೇರೆಳೆದು ಘನ್ನತೆಯ ಸಂಭ್ರಮಿಸೊ ರಾಜ್ಯೋತ್ಸವ ||
----------------------------------
ನೋಂದಣಿ ಐಡಿ : KPF-S1-6196
