Submission 22994

ಅಂತರಾತ್ಮದ ಚಿಂತೆ

ರಚನೆ : ಅಲ್ಲಾಬಕ್ಷ ನರಗುಂದ

----------------------------------

ಮನಸು ಮಸಣಕೇ ಜಾರುತಿಹುದು ಅಂಗೈಯಲ್ಲಿ ಜಗವ ಕಂಡು ಬುದ್ಧ ಬಸವರಿಲ್ಲದ ಘೋರಿಯ ನೆರಳಿಗೆ ಯೋಗ ಭೋಗವ ಕಾಣದೆ ಸಾಗುತಿದೆ ಬಲಿದ ಬೆಂದ ಜೀವವ.. ಹರಿದ ಧನ ಊರು ಸುಡುತ್ತಿಹುದು ಜಾತಿ ಗಂಟಿದ ಜನಕ್ಕೆ ಬೆಂದು ಪಂಚಮರಿಲ್ಲದ ನ್ಯಾಯದ ಬೇಲಿ ಹಾರಿ ಸತ್ಯ ಶಾಂತಿ ಮೆರೆಸದ ನಾಳಿನ ದಿನಗಳು ಕಳೆತಿಹವು ಎಂದಿನಂತೆ ಹಾಗೆ ಹಾಗೆ.. ಮಮತೆಯ ಮಡಿಲ ಬತ್ತುತಿಹುದು ಕರುಳಿಲ್ಲದ ಕುಡಿಯಲ್ಲಿ ಮಿಂದು ಸತ್ವವಿರದ ಮನೆಯ ಮಾಳಿಗೆಯಲಿ ನಿಶ್ಚಯ ಮಾಡದೇ ಬಾಳು ಸಾಗಿದೆ ಅಂತರಾತ್ಮದ ಚಿಂತೆಯಲಿ..

----------------------------------

ನೋಂದಣಿ ಐಡಿ : KPF-S1-6202

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!