ಬಂದು ನಿಂತವನು..!
ರಚನೆ : ಅಶೋಕ ಲಮಾಣಿ
----------------------------------
ಬಂದು ನಿಂತಿರುವನು.. ಜೀವನದ ಕೆಸರಿನಲ್ಲಿ ಹಸಿರ ಕನಸ ಹೊತ್ತವನು! ಪ್ರೀತಿ-ಪ್ರೇಮ, ಧರ್ಮ -ಕರ್ಮಗಳೆಂಬ ಅದೆಷ್ಟು ಕಲ್ಲುಗಳ ಹಾಸಿ ದಾಟಿದನೋ? ತೋಳು ಸೋತರು ಮುಗಿಯದ ಜವಾಬ್ದಾರಿಗಾಗಿ ಬಾಳ ಬೇಗೆಯಲಿ ಅದೆಷ್ಟು ಬೆಂದನೋ ? ಅಂತರಂಗದಲ್ಲಿ ಬೂದಿ, ಕಣ್ಣ ಹೊಳಪು ಹೊತ್ತು ಬೆಳಕು ನುಂಗಿದ ಶರದಿಯ ಒಡಲು ದಿಟ್ಟಿಸುತ್ತಾ ಬಂದು ನಿಂತಿರುವನು! ಇಲ್ಲಿ ಪ್ರಶ್ನೆಗಳಿಲ್ಲ, ಉತ್ತರದ ಹುಡುಕಾಟವಿಲ್ಲ ಬಿಡುವ ಭೀತಿಯಿಲ್ಲ, ಹಿಡಿತದ ಹಂಬಲವಿಲ್ಲ ಅಲೆಗಳ ಅಲಿಂಗನಕೆ ಅಂತರಂಗ ತಣ್ಣಗಾಗಿದೆ ಬಂದು ನಿಂತವನ... ನಿರಾಕರ ನೆರಳು ತೇಲುತಿದೆ.
----------------------------------
ನೋಂದಣಿ ಐಡಿ : KPF-S1-6165
