Submission 22782

ಮೂಕ ಗರತಿ

ರಚನೆ : ಕೆ. ಮಲ್ಲೇಶ

----------------------------------

ಅವ್ವ ಅತ್ತಷ್ಟು ನಗಲಿಲ್ಲ ಹೊತ್ತಷ್ಟು ಹೊರೆಯಾಗಲಿಲ್ಲ, ಅವಳ ಸೀರೆಯ ಸೆರಗಿನಂಚಿನ ಒದ್ದೆಯಲಿ ಬೆವರಿನೊಡನೆ ಬೆರೆತ ಕಂಬನಿಯ ಬಿಸಿಯಿತ್ತು ಅವಳು ಬದುಕಿನ ನಗ್ನತೆ ಅರಿತವಳು ಅವ್ವ ಬೆಂದಳು, ನೊಂದಳು ಹುಸಿ ನಗೆಯ ನಕ್ಕಳು, ಒಲ್ಲೆ ಎಂದರೂ ಒತ್ತಾಯದಿ ತುತ್ತನಿಟ್ಟು ಉಳಿದಷ್ಟೇ ತಾತಿಂದು ಹುಸಿ ನುಡಿವಳು 'ಹಸಿವಿಲ್ಲ' ಅವಳು ಆಸೆಯೇ ಇರದ ಆಸರೆಯ 'ಆಲ' ಅವ್ವ ಹೆತ್ತಳು, ಹೊತ್ತಳು,ಕಣ್ಣೆಲ್ಲಾ ಕಾವಲಾದಳು ತನ್ನ ತಾ ಮರೆತಳು., ಅವಳ... ಹೆಗಲ ಮೇಲಿನ ಸಂಸಾರದ ನೊಗ ಹಾಗೇ ಇದೆ ಉತ್ತುತ್ತಲಿದ್ದಾಳೆ ಹಗಲಿರುಳೆನ್ನದೆ, 'ಮಾತಿಲ್ಲದೆ' ಅವಳು ಸಾಕಾಗದ ಮೂಕ ಗರತಿ....

----------------------------------

ನೋಂದಣಿ ಐಡಿ : KPF-S1-6184

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!