Submission 22752

ಅಮ್ಮ ಅಪ್ಪ ಜಗದ ಬದುಕು

ರಚನೆ : ಮಂಜುನಾಥ್ ರಾಮಯ್ಯ ಈಳಿಗೇರ್

----------------------------------

ಹೆತ್ತು-ಹೊತ್ತವಳು ಅಮ್ಮನೇ ಆದರೂ, ಒಳಗೊಳಗೆ ನೊಂದು-ಬೆಂದದ್ದು ಅಪ್ಪನಲ್ಲವೇ? ಜನ್ಮ ನೀಡಿದಾಗ ಅಮ್ಮ ಎಂದು ಕರೆದರೂ, ಉಸಿರು ಬಿಗಿ ಹಿಡಿದು ಬಿಟ್ಟಿದ್ದು ಅಪ್ಪನಲ್ಲವೇ? ಚಂದಮಾಮನ ತೋರಿಸಿ ಕಂದನಿಗೆ ಹೊಟ್ಟೆ ತುಂಬಾ ಉಣಬಡಿಸಿ ಮಲಗಿಸಿದವಳು ಅಮ್ಮನಾದರೂ, ಹೊಟ್ಟೆ ಬಟ್ಟೆ ಕಟ್ಟಿ ಶ್ರಮವ ಪಟ್ಟಿದ್ದು ಅಪ್ಪನಲ್ಲವೇ? ಮಕ್ಕಳು ಹಠ ಹಿಡಿದಾಗ ಕೊಡಿಸಿದವಳು ಅಮ್ಮನಾದರೂ, ಅದರ ಹಿಂದಿನ ಬೆವರ ಹನಿ ಅಪ್ಪನಲ್ಲವೇ? ವಿದ್ಯೆ -ಅಕ್ಷರಗಳ ಕೈ ಹಿಡಿದು ಕಲಿಸಿದವಳು ಅಮ್ಮನಾದರೂ, ಅದರ ಹಿಂದಿನ ಬೆಳಕು ಅಪ್ಪನಲ್ಲವೇ? ಪ್ರೀತಿಸಿ, ಮುದ್ದಿಸಿ, ಗದರದೇ ಸಾಕಿದವಳು ಅಮ್ಮನಾದರೂ, ಸಾಕಷ್ಟು ಪ್ರೀತಿಯಿದ್ದರು ಜವಾಬ್ದಾರಿ ಹೊಸ್ತಿಲಲ್ಲಿ ಮೌನವಾದವರು ಅಪ್ಪನಲ್ಲವೇ? ನಾ ಕಾಣೋ ದೈವವೆ ಅಮ್ಮನೇ ಆದರೂ, ಆ ದೈವಕ್ಕೆ ದೈವವೇ ಅಪ್ಪನಲ್ಲವೇ? ಅಮ್ಮ ಇರದೇ ಜಗವಿಲ್ಲ, ಅಪ್ಪ ಇರದೇ ಬದುಕೇ ಇಲ್ಲ....

----------------------------------

ನೋಂದಣಿ ಐಡಿ : KPF-S1-6180

1,688
Total Votes
6,277
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!