Submission 22724

ಆಕೆ

ರಚನೆ : ಆದಿತ್ಯ ಸೂರ್ಯಪ್ರಕಾಶ

----------------------------------

ಕಟ್ಟಿದನು ತಾಳಿಯ, ಮೂಗುದಾರದ ಹಾಗೆ, ಹಗ್ಗದ ಹೊರೆಯೋ, ಹೂವಿನ ಭಾರವೋ, ಮೂಕಳಾಗಿ ತಲೆ ತಗ್ಗಿಸಿ ಸುಮ್ಮನಿದಳು. ಹಡೆದ ಮನೆಯ ತೊರೆದು, ನಿನ್ನ ಮನೆಯ ಹೊಸ್ತಿಲು ತುಳಿದು, ಹಿಂತಿರುಗದೆ ಬಂದಳು, ಹೊಸ ಮನೆಯ ಬೆಳಗಲು. ಮರೆತಳು ತನ್ನ ಸುಖವ, ನಿನ್ನ ಆರೈಕೆ ಮಾಡಲು, ಕೊಂದಳು ತನ್ನಾಸೆಯ, ನಿನ್ನ ಇಚ್ಚೆಯಂತೆ ಇರಲು, ಜೀವಂತ ಗೊಂಬೆಯಾದಳು, ಬಂಧದ ಬಂಧನದಲ್ಲಿ ಹೆತ್ತವರು ಕೆಳರಾದರು, ಗಂಡನೂ ಬಂಡನಾದನು ಬದುಕಿನ ಜಂಜಾಟದಲ್ಲಿ ಮೂಕಳಾದ ಮೌನೀ ಆಕೆ, ಗುಡಿ ಸೇರದ, ಬಾಡಿದ ಹೂವಾದಳಾಕೆ.

----------------------------------

ನೋಂದಣಿ ಐಡಿ : KPF-S1-6164

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!