ಜೇನುಗೂಡು
ರಚನೆ : ಮಲ್ಲಿಕಾರ್ಜುನ ನಾಯಕ
----------------------------------
ಜೇನುಗೂಡಿನ ಹಾಗೆ ಬದುಕುವುದನ್ನು ಕಲಿಯಬೇಕು ಕುಟುಂಬದಲ್ಲಿ ನಾವೆಲ್ಲರೂ ಒಂದಾಗಿ ಬಾಳಬೇಕು ಪ್ರೀತಿ ಪ್ರೇಮ ವಿಶ್ವಾಸದಿಂದ ಇರಬೇಕು ಮನೆಯ ತುಂಬಾ ನಗು ನಗುತ್ತಿರಬೇಕು.. ಮನೆಯಲ್ಲಿ ಎಲ್ಲರನ್ನೂ ಪ್ರೀತಿಸೋಣ ಸಂಸಾರದ ಬಂಡಿಯನ್ನು ಸಾಗಿಸೋಣ ಗುರು ಹಿರಿಯರನ್ನು ಗೌರವಿಸೋಣ ಮಾನವೀಯ ಮೌಲ್ಯಗಳು ಹರಿಯೋಣ... ಮನೆಯ ತುಂಬಾ ಜೇನುಗೂಡಿನಂತೆ ಎಲ್ಲರೂ ಜೊತೆ ನಡೆದಾಗ ಸ್ವರ್ಗ ಸುಖವಂತೆ ಇದ್ದದ್ದರಲ್ಲಿ ಹಂಚಿ ತಿನ್ನುವ ಗುಣವಿರಬೇಕಂತೆ ಎಷ್ಟೇ ಕಷ್ಟ ಬಂದರೂ ಬದುಕಬೇಕಂತೆ.. ಗುರು ಹಿರಿಯರ ಆಶೀರ್ವಾದ ಪಡೆಯಬೇಕು ಕಾಯಾ ವಾಚ ಮನಸ್ಸಿಂದ ದುಡಿಯಬೇಕು ರಕ್ತ ಸಂಬಂಧಗಳ ಬಾಂಧವ್ಯವನ್ನು ಅರಿಯಬೇಕು.
----------------------------------
ನೋಂದಣಿ ಐಡಿ : KPF-S1-6182
