Submission 22656

ಕನ್ನಡ ನಾಡು

ರಚನೆ : ಡಾ.ಡಿ.ಫ್ರಾನ್ಸಿಸ್ ಕ್ಸೇವಿಯರ್

----------------------------------

ಎಲ್ಲಿ ನೋಡಿದರಲ್ಲಿ ಕನ್ನಡಾಂಬೆಯೇ ನಿನ್ನಧ್ವಜಾ ಹಾರುತ್ತಿದೆ ಬಾನಿನಲ್ಲಿ ಕೆಂಪು ಹಳದಿ ಬಣ್ಣವು ಸೌಭಾಗ್ಯದ ಸಂಕೇತವು ತುಂಗಭದ್ರೆಯು ಹರಿಯುವ ಒಡಲು ಸಹ್ಯಾದ್ರಿ ಪರ್ವತ ಸಾಲು ಹಸಿರು ಕಾನನದ ಸುಂದರ ಬೀಡು ಕನ್ನಡಾಂಬೆಯೇ ನಿನ್ನಯ ಮಡಿಲು ಜೋಗ ಜಲಪಾತದ ಸೊಬಗು ಹಂಪೆಯ ಗತವೈಭವದ ಮೆರಗು ಕಲ್ಲುಕಲ್ಲಿನಲ್ಲಿ ಸಂಗೀತಸ್ವರವು ಸಾಹಿತ್ಯ ರಸಋಷಿಗಳ ನೆಲೆನಾಡು ಕಲಾ ಕಣ್ಮಣಿಗಳ ರಂಗಸ್ಥಾನವು ಬಸವಾದಿ ಶರಣರ ಪುಣ್ಯಸ್ಥಳವು ಸಾಧು ಸಂತರತಪೋಭೂಮಿಯು ಕರುನಾಡಿದು ಹೆಮ್ಮೆಯ ಬೀಡಿದು

----------------------------------

ನೋಂದಣಿ ಐಡಿ : KPF-S1-6175

0
Total Votes
6
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!