ನನ್ನಪ್ಪ....
ರಚನೆ : ನಳಿನ ಎಂ ಜೆ
----------------------------------
ಕಾರ್ಮೋಡ ಆವರಿಸಿದಾಗ ಬೆಳದಿಂಗಳ ಬೆಳಕಂತೆ ಲೋಕವೇ ನಶ್ವರವೆನಿಸಿದಾಗ ನಾನಿದ್ದೇನೆ ಎಂಬ ಭರವಸೆಯಂತೆ ಕಾಣದ ಕೈಗಳವು ನಿರಂತರವಾಗಿ ಬೆನ್ನಹಿಂದೆಯೇ ಕಾಪಾಡುವಂತೆ ಪ್ರತಿ ಮಾತಿನಲ್ಲೂ ಕಾಣಸಿಗುವ ಪ್ರೇಮವು ಮಾಸದಂತೆ ....... ತುಸು ಮೌನದಿ ಕಣ್ಣಿನಲ್ಲೇ ಮಾತಾಡುವ ಪ್ರೀತಿಯದು ಬೆಟ್ಟದಷ್ಟು ಮಮತೆಯ ಬಚ್ಚಿಕೊಂಡಿರುವ ಪ್ರೇಮವದು ಕಣ್ಣಂಚಲ್ಲೇ ತೋರುವ ನಿಸ್ವಾರ್ಥದ ಬಂಧವದು ಮಗಳೇ! ಎನ್ನುವಲ್ಲಿ ಬಣ್ಣಿಸಲಾರದಷ್ಟು ಬಾನೆತ್ತರದ ಪ್ರೀತಿಪ್ರೇಮವ ಬಂಧಿಸಿರುವುದು.. ನನ್ನ ಪ್ರತಿ ಏಳಿಗೆಯಲ್ಲೂ ಅವನದೇ ಅಡಿಪಾಯ ನನ್ನ ತನವೆಲ್ಲವೂ ಅವನದೇ ಸಂಸ್ಕಾರ ನನ್ನ ಕನಸಿಗಂತೂ ಅವನದೇ ಪ್ರೇರಣೆ ನನ್ನೆಲ್ಲಾ ಪ್ರತಿಹೆಜ್ಜೆಯಲ್ಲೂ ಅವನ ಸಾಕಾರ ನನ್ನೆಲ್ಲಾ ಅಭಿಯಾನದ ಮೊದಲ ಮಿಡಿತ ನನ್ನೆಲ್ಲಾ ಶಕ್ತಿಯ ಸೂತ್ರಧಾರ ಅವನೇ ನನ್ನಪ್ಪ...
----------------------------------
ನೋಂದಣಿ ಐಡಿ : KPF-S1-6143
