ದೌರಜನ್ಯವೇಕೆ ಹೆಣ್ಣಿನ ಸೌಜನ್ಯತೆಯ ಮೇಲೆ.?
ರಚನೆ : ಶಿವಾನಂದ ಅಣ್ಣಿಗೇರಿ
----------------------------------
ಹೆಣ್ಣೆಂಬ ದೈವ ಕಣೋ ಅವಳು ಮಣ್ಣಾಗೋ ಮುನ್ನ ಗೌರವಿಸು.. ಬದುಕೆಂಬ ಮನೆಗೆ ಬೆಳಕೆಂಬ ಕಣ್ಣು ಕಣೋ ಅವಳು ಕಾಮಿಸೋ ಮುನ್ನ ಎದೆಯ ಕಣ್ಣ ತೆರೆದು ಪ್ರೀತಿಸು.! ಏಕೆ ದೌರ್ಜನ್ಯ ಅವಳ ಮೇಲೆ ನಿನ್ನದು.. ನಮ್ಮ ಬದುಕಿನ ಆಟಕ್ಕಾಗಿ ತನ್ನ ಮಡಿಲನ್ನೆ ಮೈದಾನವನ್ನಾಗಿಸಿಕೊಂಡಿದ್ದಕ್ಕಾ?? ಇಲ್ಲ ನಿನ್ನೊಳಗಿನ ಕ್ರೂರ ಕಾಮಕ್ಕೆ ಸಹಕರಿಸದೆ ಇದ್ದದ್ದಕ್ಕೆ ನಾ..? ಒಂದು ಬಾರಿ ನೀ ತುಟಿ ಹಚ್ಚಿ ಹೀರಿದ ತಾಯಿಯ ಎದೆಯ ಹಾಲನು ನೆನೆದಿದ್ದರೆ ಸಾಕಿತ್ತು.. ಹಾಲಿನಂತೆ ಶುದ್ದವಾಗಿದ್ದ ಜೀವಕ್ಕೆ ದೇಹಕ್ಕೆ ನೀ ಕಾಮದ ಕಳಂಕವಾಗುತ್ತಿರಲಿಲ್ಲ.. ಕೇಳು ಇಲ್ಲಿ ಹೇ ಬಚ್ಚಲು ಕೋಣೆಯಂತ ಕಾಮದ ಕ್ರೂರಿಯೇ.. ಏನಿತ್ತು ನಮ್ಮ ಬದುಕಲ್ಲಿ ?? ಹೆಣ್ಣೆಂಬ ದೈವ ಇಲ್ಲದೆ ಇದ್ದಿದ್ದರೆ , ನಮ್ಮ ಮನೆಯಲ್ಲಿ ಮಗು ಆಡುತ್ತಿರಲಿಲ್ಲ.. ಮನದಲ್ಲಿ ನಗು ಹುಟ್ಟುತ್ತಿರಲಿಲ್ಲ.. ಅವಳಿಂದಲೇ ಈ ಜಗದಲ್ಲಿ ನಗು ಮಗು ಜನಿಸಿದ್ದು ನೆನಪಿರಲಿ...!
----------------------------------
ನೋಂದಣಿ ಐಡಿ : KPF-S1-6134
