Submission 22548

ಜೀವಜಲ

ರಚನೆ : ಅಶ್ವಿನಿ ಎಸ್ ವಿ

----------------------------------

ಜೀವ ಜಾಲಕೆ ಬೇಕು ಜೀವಜಲ ಆದಿಲ್ಲದೇ ಉಳಿಯುವುದೇ ಜೀವಕುಲ? ಬರಡಾದ ಬಡಬಾನಲ ಬಾಯ್ದೆರೆದು ಕಾದಿದೆ ಬೀಳುವುದೇ ಹನಿ ಜಲ ಭೂದೇವಿಯ ಮಡಿಲಿಗೆ ಜೀವಿಗಳ ಜೀವಕೆ ನೀರೇ ಆಧಾರ ನೀರಿಲ್ಲದ ಧರೆ ಬರಿದೇ ಬಿಡಾರ ಪ್ರಾಣಿ ಪಕ್ಷಿಗಳು ಬೆಂಡಾಗಿ ಬಳಲಿವೆ ರೈತನ ಕೂಗು ಪುನಾರವರ್ತಿತವಾಗಿ ಮೊಳಗಿವೆ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಹೀಗೇ ಮುಂದುವರಿದರೆ ಏನು ಪರಿಹಾರ? ವರುಣದೇವ ಕೃಪೆಯಮಾಡಿ ಜೀವಜಲವ ಕರುಣಿಸು ನಿನ್ನ ನಂಬಿ ಬದುಕುತಿರುವ ಜೀವ ಜಾಲವ ರಕ್ಷಿಸು

----------------------------------

ನೋಂದಣಿ ಐಡಿ : KPF-S1-6133

18
Total Votes
69
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!