ಹೆತ್ತವಳು ,ಹೋನ್ನವಳು
ರಚನೆ : ಗೌರಿಶಂಕರ ನಾಯಿಕ
----------------------------------
ಮೂಗ ತುದಿಯಲಿ ಕೋಪವೆಂದು ಹಾಕ್ಯರೊಂದ ಮೂಗುತಿ ವಯಸ್ಸಿಗೆ ಬಂದಾಗ ಆಗುವವಳವಳು ಋತುಮತಿ ಯಾವ ಗಂಡು ಎಷ್ಟೇ ಶಾಸ್ತ್ರವನರಿತರು ತಿಳಿಬಯಸುವುದಿಲ್ಲ ಅವಳ ಸ್ಥಿತಿ ಗತಿ ಹೆಣ್ಮಗಳು ಭಾರವೆಂದು ಮಾಡ್ಯಾರ ಅವಳನ್ನ ಇನ್ನೊಬ್ಬನ ಹೆಂಡತಿ ಮದುವೆಯಾದ ಗಂಡನವನು ತೋರಲಿಲ್ಲ ಅವಳ ನೋವ ಸರಿದುಗಿಸುವಂತ ಪ್ರೀತಿ.. ಎಲ್ಲವನು ಸಹಿಸಿದವಳು ಗರ್ಭವತಿ ಆಗ್ಯಾಳ ಒಂಬತ್ತು ತಿಂಗಳ ಗರ್ಭ ಹೊತ್ತು ಗರ್ಭದಾರಣೆ ಮಾಡ್ಯಾಳ ಹೆತ್ತು ಹೊತ್ತು ಸಾಕಿ ಅವಳು ದೊಡ್ಡವರ ಮಾಡ್ಯಾಳ ಇವೆಲ್ಲವ ಮಾಡಿದಾಕೆಗೆ ಮುಪ್ಪಿನ ಕಾಲಕ ಮನೆಯಿಂದ ಹೊರಗಾಕಿದರ ಹ್ಯಾಂಗ ತಡದಿತ್ತಾ ತಾಯಿಯ ಕರುಳ... ಆ ತಾಯಿಯ ಕರುಳ...!! ಹೆಣ್ಣಾಕಿ ಹೊನ್ನಾಕಿ ನನ್ನ ಬಾಳ ಕಣ್ಣಾಕಿ ಜಗತ್ತೇ ಕಾಣದ ನಕ್ಷತ್ರದಂತ ತಾಯಿ ನನ್ನಾಕಿ...
----------------------------------
ನೋಂದಣಿ ಐಡಿ : KPF-S1-6116
