ಭಾವನೆಯ ತೊಟ್ಟಿಲು ಹೆಣ್ಣು
ರಚನೆ : ಲಿಂಗರಾಜ ಎಂ. ಮಾಯಾಚಾರಿ
----------------------------------
ಸಕಲ ಜೀವ ರಾಶಿಗಳಿಗೆ ಜೀವ ಕೊಟ್ಟವಳು ಹೆಣ್ಣು| ನಾಳೆಯ ಕುಡಿಗಳನ್ನು ಹುಟ್ಟು ಹಾಕುವವಳು ಹೆಣ್ಣು|| ಹರಿಯುವ ನದಿಗಳಿಗೆ ಉಸಿರಾದವಳು, ಹೆಸರಾದವಳು ಹೆಣ್ಣು| ಹಾರುವ ಹಕ್ಕಿಗೆ ಸಹಸ್ರ ಪ್ರಾಣಿಗಳಿಗೆ ಆಸರೆಯಾದವಳು ಹೆಣ್ಣು || ನಲಿವಿನ ನೋಟದಿ ದುಗುಡ ಮರೆಸುವಳು ಹೆಣ್ಣು| ದಾಹ ಹಿಂಗರಿಸಿ ಬೆಳಕು ಹರಿಸುವವಳು ಹೆಣ್ಣು|| ನಂಬಿದ ಜೀವಕೆ ಕನಸಿನ ಕೋಟೆಯಾದವಳು ಹೆಣ್ಣು| ಉಸಿರಿನೊಂದಿಗೆ ಉಸಿರ ಬೆರೆಸಿ ಬದುಕು ಸಾಗಿಸುವಳು ಹೆಣ್ಣು|| ಅದೆಷ್ಟೋ ನೊಂದ ಹೃದಯಗಳಿಗೆ ಸಾಂತ್ವನ ಹೇಳಿದವಳು ಹೆಣ್ಣು| ಭಾವನೆಗಳ ತೊಟ್ಟಿಲಿಗೆ ಜೀವ ತುಂಬುವವಳು ಹೆಣ್ಣು|| ಜನ್ಮ ಜನ್ಮಾಂತರಗಳ ಸಂಬಂಧಕ್ಕೆ ಕೊಂಡಿಯಾದವಳು ಹೆಣ್ಣು| ಸತ್ತ ಹೃದಯಕ್ಕೆ ಮೊದಲು ಮಿಡಿಯುವ ಜೀವವೇ ಹೆಣ್ಣು|| ಸತ್ತ ಹೃದಯಕ್ಕೆ ಮೊದಲು ಮಿಡಿಯುವ ಜೀವವೇ ಹೆಣ್ಣು|
----------------------------------
ನೋಂದಣಿ ಐಡಿ : KPF-S1-6121
