Submission 22450

ಪ್ರಥಮ ವಂದಿತ

ರಚನೆ : ದೇವಕಿ.ಮಾ.ಧರ್ಮಟ್ಟಿ

----------------------------------

ಪರಶಿವ ಪಾರ್ವತಿಯ ಮುದ್ದಿನ ಕಂದನೇ ಗರಿಕೆ ಫಲ ಪುಷ್ಪ ಅಕ್ಷತೆ ಸಮರ್ಪಣೆ ಮುಷಿಕ ವಾಹನ ಮೋದಕ ಪ್ರಿಯನೇ ಗಣಗಳ ನಾಯಕ ಪ್ರಥಮ ವಂದಿತನೇ!! ಅಮ್ಮನು ಸ್ನಾನಕ್ಕೆ ಹೋಗಿರಲು ಬಾಗಿಲು ಕಾಯುತ ಕುಳಿತಿರಲು ತಂದೆಯು ಒಳಹೋಗಲು ಯತ್ನಿಸಲು ಅಪ್ಪನ ತಡೆಯಲು ಮುಂದಾಗಲೂ ರೌದ್ರತಾಳಿ ಹಾರಿತು ತ್ರಿಶುಲಕೆ ಶಿರವೂ!! ರೋಧಿಸುತ ಅಮ್ಮನು ಹೊರಬಂದು ದೂರದ ಆನೆಯ ಮುಖ ತಂದು ಹಚ್ಚಿದರಾಗ ವಿನಾಯಕನಿಗಂದು ಪೂಜಿಪೆವು ಈಗ ಗಜವದನನೆಂದು!!

----------------------------------

ನೋಂದಣಿ ಐಡಿ : KPF-S1-6094

7
Total Votes
26
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!