Submission 22419

ಕೈಲಾಸನಾಥನ ಕಂಡಾಗ

ರಚನೆ : ಚಂದ್ರಶೇಖರ ಶ್ರೀನಿವಾಸಪುರ

----------------------------------

ಬರುವ ದಾರಿಯಲಿ ಶಿವನ ಕಂಡೆನು ನಾ ಕರದಲಿ ಹಿಡಿದ ಢಮರು ನಾದವು ಕೇಳಿದೆ ನಾ ನಂದಿಯ ಜೊತೆಯಲಿ ಸಾಗುವ ಪರಿಯದು ವದನದಲಿ ಏನು ವರ್ಚಸ್ಸು ಇವನದು ಧ್ಯಾನ ಮಾಡಿ ಕೇಳುವವನಿಗೆ ಇಲ್ಲವೆನ್ನಲಾರದೆ ವರಗಳ ಕೊಡುವ ಕೈ ಗುಣ ಅವನದು ಕಠೋರ ತಪಸ್ಸು ಮಾಡದವನನೂ ಮೆಚ್ಚುವ ಮೂರು ಕಣ್ಣುಳ್ಳ ಮಹಾಶಿವನಿವನು ಜಗದ ಸೃಷ್ಟಿಯ ಕಾರಣಕರ್ತನು ನೆನೆದವರ ಮನದಲ್ಲಿ ಉಳಿದುಕೊಂಡವನು ಕೈಲಾಸ ಶಿಖರದ ಮೇಲೆ ಕುಳಿತು ಯೋಗಗೈದು ಭೋಗ ಭಾಗ್ಯಗಳನು ನೀಡುವವನು ತ್ರಿಶೂಲ ಹಿಡಿದು ರುದ್ರಾಕ್ಷಿಗಳ ಸರಮಾಲೆ ಧರಿಸಿ ಹಣೆಗೆ ವಿಭೂತಿಯ ಬಳಿದವನಿವನು

----------------------------------

ನೋಂದಣಿ ಐಡಿ : KPF-S1-6082

0
Total Votes
5
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!