Submission 22409

ಮಳೆ ಇಲ್ಲದೆ

ರಚನೆ : ಶಿವರುದ್ರ ನಾಯಕ್. ಆರ್

----------------------------------

ಮಳೆ ಇಲ್ಲದೆ ಸೊರಗಿದೆ ಧರೆ ರೈತರಿಗೆ ಕೊಟ್ಟಂತಾಗಿದೆ ಬರೆ ಹಸಿರು ಆಗುತ್ತಿದೆ ಮರೆ ಮಳೆ ಇಲ್ಲದೆ ಒಣಗಿದೆ ಕೆರೆ ತೊರೆ ಪ್ರಾಣಿ ಪಕ್ಷಿಗಳಿಗೆ ಇಲ್ಲದಂತಾಗಿದೆ ಆಸರೆ ಧರೆಗೆ ಸುರಿಯಲಿ ಮಳೆ ರೈತರು ಬೆಳೆಯಲಿ ಬೆಳೆ ತುಂಬಲಿ ಕೆರೆ, ಕಟ್ಟೆ, ಬಾವಿ, ಹೊಳೆ ಎಲ್ಲಾ ಜೀವಿಗಳಿಗೆ ಸಿಗಲಿ ನೆಲೆ ಹಸಿರಾಗಲಿ ಗಿಡ ಮರ ಮಲೆ ಎಲ್ಲೆಲ್ಲೂ ಕೇಳಿಸಲಿ ಪಕ್ಷಿಗಳ ಚಿಲಿಪಿಲಿಯ ಇಂಚರ ಹರಡಲಿ ದಂಬಿಗಳ ಝೇಂಕಾರ ಕಾಡಿನಲ್ಲಿ ಅರಳಲಿ ಮಂದಾರ ನಾಡಿಗೆ ಪ್ರಕೃತಿಯೇ ಸಿಂಗಾರ ಇದುವೇ ಸೃಷ್ಟಿಯ ಆಗಾರ

----------------------------------

ನೋಂದಣಿ ಐಡಿ : KPF-S1-6088

60
Total Votes
175
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!