ಗುರಿ
ರಚನೆ : ದಿವ್ಯಾ ವಿ
----------------------------------
ನಗುತ್ತಲೆ ಕಾಲಿಟ್ಟ ಪುಟ್ಟ ಹೆಜ್ಜೆ ತಾಯಿಯ ಆಸರೆಯ ಕನಸ ಕಂಡೆ ತಂದೆಯ ತಿರಸ್ಕಾರ ನುಂಗಲಾದೆ ಕೊನೆಗೂ ಒಂದು ದಿನ ಅನಾಥಳಾದೆ ರಸ್ತೆಯಲ್ಲಿ ಕಂಡವು ಮೂಕಜೀವಿಗಳು ಅಮ್ಮಾ! ಯಾತಕ್ಕಾಗಿ ಇವು ನರಳುತಿಹುವು ನನ್ನ ನೋವಿಗೆ ಔಷದವಿಲ್ಲ ಈ ಮೂಕ ಜೀವಿಗಳಿಗೆ ಆಸರೆ ಇಲ್ಲ ಬಾಲ್ಯದಲ್ಲೇ ಮನದ ಮಿಡಿತ ಅರಿತೆ ಕಷ್ಟ ಪಟ್ಟು ವಿದ್ಯೆ ಬುದ್ಧಿ ಕಲೆತೆ ಮುಂದೆನಡೆದು ಮೂಕಜೀವಿಗಳನ್ನು ಉಳಿಸು ಪಣ ತೊಟ್ಟೆ ಕೊನೆಗೆ ಪಶು ವೈದ್ಯಳಾಗಿಯೇ ಬಿಟ್ಟೆ!!
----------------------------------
ನೋಂದಣಿ ಐಡಿ : KPF-S1-6066
