ಕನ್ನಡವೆಂಬ ಮಣಿಹಾರ
ರಚನೆ : ರಕ್ಷಿತಾ ರವಿ ಆಳ್ಕೆ
----------------------------------
ಮುತ್ತೊಂದು ಪೊಣಿಸಿ ಚೆಂದನೆಯ ಸರ ನೇಯ್ದಂತೆ ನನ್ನ ಮಾತೃಭಾಷೆ ಕನ್ನಡ | ಒಂದೊಂದು ಅಕ್ಷರದಲ್ಲೂ ಚುಕ್ಕಿ- ತಾರೆಗಳ ಸೌಂದರ್ಯ ಕಂಡ ಅನುಭವ ಈ ಕನ್ನಡ II ಬರೆದಷ್ಟೂ ಸಾಲದೂ, ಓದಿದಷ್ಟೂ ಸಾಲದು, ಸ್ಪಷ್ಟ ಪದಗಳ ಅಭಿನಯವೇ ಮನಮೋಹಕ ಕನ್ನಡ | ಇಂಪಾದ ಸಂಗೀತಕ್ಕೆ ಸ್ವಾರಸ್ಯದ ಸಾಹಿತ್ಯ ಪದವೇ ಕನ್ನಡ ಇತಿಹಾಸದ ಪುಟಗಳ ತೆಗೆದಾಗ ಪರಂಪರೆಯ ಪರ್ವತವೇ ಕಾಣುವುದೆನ್ನ ಭಾಷೆಯಲ್ಲಿ ಕವಿರತ್ನರಿಂದ ಹಿಡಿದು ಎನ್ನಂತಹ ಸಾಮಾನ್ಯರನ್ನೂ ಬರಹದ ಕಡೆ ಸೆಳೆವ ಶಕ್ತಿ ಎನ್ನ ಭಾಷೆಯಲ್ಲಿ ಭಾರತಾಂಬೆಯ ಮಡಿಲಲ್ಲಿ ಭುವನೇಶ್ವರಿಯ ಅಂದ ಹೆಚ್ಚಿಸುವ ಈ ಮಣಿಹಾರ ಅರಶಿನ ಕುಂಕುಮದ ಅಲಂಕಾರ
----------------------------------
ನೋಂದಣಿ ಐಡಿ : KPF-S1-6050
