ಆದರೆ..?
ರಚನೆ : ಮಹಮ್ಮದ್ ರಫೀಕ್ ಕೊಟ್ಟೂರು
----------------------------------
ನಾನೊಂದು ಹೆಮ್ಮರವಾಗಿಬೇಕಿತ್ತು ಬೇರು ಬಿಟ್ಟು ನೆಲದ ಸತ್ವವ ಹೀರಿ ನೆಲವನ್ನೇ ಅಪ್ಪಿದಂತೆ ಮರದಂತೆ ತಣ್ಣೆಳಲ ಚೆಲ್ಲಬೇಕಿತ್ತು ರೆಂಬೆ ಕೊಂಬೆಗಳ ಆಚೀಚೆ ಚಾಚಿ ಖಗ-ಮೃಗಗಳು ನನ್ನ ಮಡಿಲಲ್ಲಿ ಪಡಿಸುವಂತೆ ಬೆಳೆದಂತೆಯೇ ಸಾಗಬೇಕಿತ್ತು ಹೂವಾಗಿ, ಕಾಯಾಗಿ, ಹೆಣ್ಣಾಗಿ ತುತ್ತಾಗಿ ಅನ್ನ ವಾಗುವ ತೆರದಲಿ ಆದರೆ... ?
----------------------------------
ನೋಂದಣಿ ಐಡಿ : KPF-S1-6047
