Submission 22285

ಬದುಕು

ರಚನೆ : ವಿರೇಶ ನಾಯಕ

----------------------------------

ಬದುಕು ಉಯ್ಯಾಲೆಯಿದು ಒಂದೆಡೆ ಸಗ್ಗ, ಮತ್ತೊಂದೆಡೆ ಯಾತನೆ ಆದಿ ಅಂತ್ಯದ ಸಮಾನಾಂತರ ರೇಖೆ ಸಾವಿರ ಹೊರಳುಗಳು ಮಧ್ಯದಲಿ ಸಹಜವಲ್ಲ ಕಡಲೆ ಸುಲಿದ ಸಿಪ್ಪೆಯಂತೆ ಮೋಡ ಸುರಿಸುವ ಕಣ್ಣೀರಿಗೆ ಟಿಸಿಲೊಡೆದ ಬೀಜ ಬಳ್ಳಿಯಾದಂತೆ ಯಾರದ್ದೋ ವ್ಯಾಕುಲ ವೇದನೆಗೆ ಕೋಮಲ ಶಬ್ದ ಠಂಕಿಸಿ ಹಾಡಾಗಿಸಿದಂತೆ ಬದುಕು ಅಷ್ಟು ಕಠೋರವೂ ಅಲ್ಲ ಕಡಲ ಅಲೆ ಮುಗಿಲ ಮುಟ್ಟುವ ಯತ್ನದಂತೆ ನಾಳೆಯ ಹಗಲಿಗೆ ಮಾತಾಡುವ ಹಂಬಲ ಮೂಕ ಸ್ವರಗಳಿಗೆ ಹಿಮದಷ್ಟೇ ನಡುಕ ಅದರೂ, ಬಾಳೊಂದು ನಿತ್ಯೋತ್ಸವ ಕಂದೀಲ ಕೆಳಗಿನ ಕತ್ತಲೆಯಂತೆ

----------------------------------

ನೋಂದಣಿ ಐಡಿ : KPF-S1-6026

1
Total Votes
13
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!