ವಧು
ರಚನೆ : ಸಂತೋಷ ಯಲ್ಲಪ್ಪ ಚಿಜ್ಜೇರಿ
----------------------------------
ಹೆಣ್ಣು ನೋಡಕಂತ ಗಂಡು ಬರತಾನ ಜೊತೆಗೆ ಹಣ್ಣು ಹಂಪಲಾ ತರತಾನ ಗಂಡ್ಹೆಣ್ಣು ಒಪ್ಪಿದ್ರ ರೆಡಿಯಾಗ್ತಾರ ಲಗ್ನಕ ಕೇಳ್ತಾರ ಎಷ್ಟರ ಕೊಡ್ತೀರಿ ವರದಕ್ಷಿಣೆ ತುಣುಕ ಮಾತಾಡಿ ಮಾತಾಡಿ ಲಗ್ನವ ಕೂರ್ಸಿ ಚಲೋ ದಿನ ಯಾವಗೆಂದು ಜೋತಿಷ್ಯ ಕೇಳ್ಸಿ ಮಾಡಿದ್ರು ಮದುವಿನ ಚಲೋ ಊಟ ಹಾಕ್ಸಿ ಬಂದ್ಹೋಗ್ಯಾರ ಎಲ್ಲಾ ಮಧುಮಕ್ಳ ಹರಸಿ ಬರತಾಳ ಎಡಗಾಲಲಿ ಸೇರ ಒದ್ಬಿಟ್ಟು ಕಾಲ್ಬೆರಳ ಮಧ್ಯದಲಿ ಮೊಳೆಯನ್ನಿಟ್ಟು ಮನೆಯೊಳಗೆ ಬರತಾಳ ಬಲಗಾಲಿಟ್ಟು ಒಳ್ಳೇದ ಬಯಸ್ತಾಳ ದೀಪ ಹಚ್ಬಿಟ್ಟು ಸರಿನೋ! ತಪ್ಪೋ! ಕಷ್ಟವೋ! ಸುಖವೋ! ಸಂಸಾರ ಕಾಪಾಡ್ತ ಬದುಕ್ತಾಳವಳು.
----------------------------------
ನೋಂದಣಿ ಐಡಿ : KPF-S1-6023
