Submission 22275

ಆಟ ನಿಂತಿಲ್ಲ

ರಚನೆ : ನಾಗರತ್ನ ಚನ್ನಬಸಪ್ಪ ಹೊಸಮನಿ

----------------------------------

ಶುರು ಆಗಿದೆ... ಆಟ ನಿಂತಿಲ್ಲ... ಕೊಟ್ಟ ಮಾತನ್ನು ಕಟ್ಟಿ ಇಟ್ಟವರೆದುರು ನಿಲ್ಲದೆ ಗೆಲ್ಲಲು.... ಆಟ ನಿಂತಿಲ್ಲ... ಕನಿವರಿಕೆಯ ಕನಸನ್ನು ಮುರಿದವರೆದುರು ನನಸಾಗಿಸಿ ನಗಲು..... ಆಟ ನಿಂತಿಲ್ಲ... ಮುಂದಿಟ್ಟ ಹೆಜ್ಜೆಗೆ ಮುಳ್ಳು ಹಾಸಿದವರೆದುರು ಜೋಡು ಹಾಕಿ ನುಗ್ಗಲು ಆಟ ನಿಂತಿಲ್ಲ.. ನಯವಂಚನೆಮಾಡಿ ತಿರಸ್ಕರಿಸಿದರೆದುರು ನೆಲಕ್ಕುರುಳದೆ ಮೇಲೇರಲು... ಆಟ ನಿಂತಿಲ್ಲ.. ಗಣನೆಗೆ ತೆಗೆದುಕೊಳ್ಳದೆ ಗದರಿದವರೆದುರು ಗೆದ್ದು ಗಮನ ಸೆಳೆಯಲು... ಆಟ ನಿಂತಿಲ್ಲ.. ಎದೆಗೊದ್ದು ಹೋದವರೆದೂರು ಗದ್ದುಗೆ ಏರಿ ಗೌರವವನ್ನು ಪಡೆಯಲು.. ಆಟ ನಿಂತಿಲ್ಲ.. ಕಣ್ಣೀರ ತರಸಿದವರೆದೂರು ಕರುಣೆ ತೋರು ಎಂದು ಕೈ ಮುಗಿಸಿಕೊಳ್ಳಲು.. ಆಟ ನಿಂತಿಲ್ಲ... ಅಂಗಳದಿ ಹಾಯುವಾಗ ಅಣಕಿಸಿ ನಕ್ಕವರು ನನ್ನ ನೋಡಿ ಬೆರಗಿಲೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳಲು... ಆಟ ನಿಂತಿಲ್ಲ... ಸೊಕ್ಕಿನಿಂದ ತಳ್ಳಿದವರಿಗೂ ಸಿಕ್ಕು ಬಿಡಿಸಿ ಏಳು ಬಣ್ಣದ ರಂಗು ಹಚ್ಚಲು

----------------------------------

ನೋಂದಣಿ ಐಡಿ : KPF-S1-6016

35
Total Votes
110
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!