ಹೊತ್ತು ಹೇತ್ತೊಳು
ರಚನೆ : ಅಂಕಿತ್ ಎಲ್ ಮುಂಡವಾಡ
----------------------------------
ತಿದ್ದಿ ತೀಡಿ ಪಾಠ ಹೇಳಿಕೊಟ್ಟಳು ತಪ್ಪಿದಲ್ಲಿ ತಲೆಗೆ ತಟ್ಟಿ ತಿಳಿ ಹೇಳಿದವಳು ಎರಡು ರೂಪಾಯಿ ಕೊಟ್ಟು ಶಾಲೆಗೆ ಕಳುಹಿಸ್ತಿದ್ಲು, ತಾನು ಮಾತ್ರ ಹೊತ್ತು ಮುನುಗುತನ ಕಳೆ ತೆಗೆಯಕ ಹೋಗ್ತಿದ್ಲು ಮನಿಗೆ ಬರತ್ಲೆ ಬಿಸಿ ಬಿಸಿ ರೊಟ್ಟಿ ಮಾಡಿ ಹೊಟ್ಟಿ ತುಂಬಿಸ್ತಿದ್ಲು, ವಾರದ ಪಗಾರ ದುಡಿತಿದ್ಲು ದುಡಿದು ಮನಿ ನಡಿಸ್ತಿದ್ಲು ಅಪ್ಪಗ ಬುತ್ತಿ ಕಟ್ಟಿ ಕೊಡ್ತಿದ್ಲು ತಾನು ಹೊಲಕ್ ಹೋಗ್ತಿದ್ಲೂ, ಅಮ್ಮ ಅದ್ಯಾಕೋ ಅಷ್ಟು ದುಡಿತಿದ್ಲೂ ಅದ್ಯಕ್ ಅಸ್ಟ್ ಕಷ್ಟ ಪಡ್ತಿದ್ಲು, ಅಮ್ಮ ಮನೆಗಾಗಿ ಜೀವ ತೆಯಿದವಳು ಅಮ್ಮ ಮಕ್ಕಳಿಗಾಗಿ ನೂವ ನುಂಗಿದಳು ಅಮ್ಮ ಅದೆಸ್ಟೋ ತ್ಯಾಗ ಮಾಡಿದಳು ಅವಳೇ ನಮ್ಮೆಲ್ಲರ ಹೊತ್ತು ಹೆತ್ತೊಳು.
----------------------------------
ನೋಂದಣಿ ಐಡಿ : KPF-S1-6013
