ಕನಸುಗಳ ಬೆನ್ನೆರೀ
ರಚನೆ : ಚಂದ್ರಗೌಡ. ಎನ್. ಪಾಟೀಲ
----------------------------------
ನನಸಾಗದಿರುವ ಕನಸುಗಳ ಬೆನ್ನೇರಿ ಹೊರಟಿರುವೆ, ಬಾನಂಗಳದಲ್ಲಿರುವ ಸೂತ್ರವಿರದ ಗಾಳಿಪಟದಂತೆ, ತಿರುಗುವಂತಾಗಿದೆ ಎನ್ನ ಬದುಕು... ಸಾಗರದ ಮಧ್ಯ ಕಡಲ ಅಲೆಗಳಿಗೆ ಸಿಲುಕಿ,ದಿಕ್ಕು ಕಾಣದ ಹಡಗಿನಂತೆ, ತೀರ ಸಿಗದೆ ಅಲೆಯುವಂತೆ ಅಲೆಯುವಂತಾಗಿದೆ ಎನ್ನ ಬದುಕು... ಗುರು,ಗುರಿ ಇದ್ದರೂ ಸಾಧಿಸಲಾಗದು ಸಾಧನೆ, ಛಲವಿದೆ, ಪ್ರಯತ್ನವಿದೆ, ಗುರಿ ದೂರವಾಗುತ್ತಿದೆ, ಸಾಧನೆ ಇಲ್ಲದಾಗಿದೆ ಎನ್ನ ಬದುಕು... ಪರಿಚಯಿಸು ನನ್ನ ಈ ಪ್ರಪಂಚಕ್ಕೆ ಸಾಧಕರ ಯಾದಿಯೊಂದಿಗೆ, ನಾವೇ ತೀರ ಸೇರಿದಂತೆ, ಗಾಳಿಪಟ ಬಾನ ಸೇರಿದಂತೆ, ಗುರಿ ಸೇರುವಂತಾಗಲಿ ಎನ್ನ ಬದುಕು...
----------------------------------
ನೋಂದಣಿ ಐಡಿ : KPF-S1-6004
