Submission 22247

ದಂದುಗದ ಕಾಲ

ರಚನೆ : ಅನನ್ಯ ಎಚ್ ಸುಬ್ರಹ್ಮಣ್ಯ

----------------------------------

ಸಾಧನೆಯ ವಿಕಾಸಕ್ಕಾಗಿ ಅಲೆದಾಟ ಹಿತಾಸಕ್ತಿಯಿಂದ ಕನಸಿನ ದಾರಿಯಲಿ ಹುಡುಕಾಟ ದುಡಿಮೆಯ ವಲಯದತ್ತ ಕಣ್ಣಾ ನೋಟ ವಾಸ್ತವಾಂಶಗಳ ಒಪ್ಪಿಕೊಳ್ಳುವುದೇ ಜೀವನದಾಟ ತಿರುವಿನೊಳು ಅಡಚಣೆಯ ದೃಷ್ಟಿ ತಾಕಿದೆ ಮಾನವೀಯ ನುಡಿಗಳು ವಿಮೋಚನೆಗೊಳ್ಳುತ್ತಿದೆ. ಪ್ರಧಾನ ವ್ಯವಸ್ಥೆಯಲ್ಲಿ ಕುರುಡಾಗಬೇಕಿದೆ ಗೆಲುವಿನ ಛಲವ ರೂಪಿಸಿಕೊಳ್ಳಬೇಕಿದೆ ಸಂಶೋಧನೆಯ ಕವಲಿನಲ್ಲಿ ಹೆಜ್ಜೆ ಇಡಬೇಕು ದಂದುಗದ ಹುಡುಕಾಟದಲ್ಲಿ ತಾಳ್ಮೆ ಇರಬೇಕು ನಿದ್ರಿಸುವ ಅಕ್ಷಿಯ ಪಥ ತೆರೆದುಕೊಳ್ಳಬೇಕು ನಮ್ಮೊಳಗಿನ ಆತಂಕಕ್ಕೆ ನಾವೇಉತ್ತರವಾಗಬೇಕು ಬದುಕಿನ ಯೋಚನೆ ಹೊಸತನವಾಗಿರಬೇಕು ಜ್ಞಾನದ ಕಲಿಕೆಯಲ್ಲಿ ಬಿಡುವಿಲ್ಲದಂತಿರಬೇಕು.

----------------------------------

ನೋಂದಣಿ ಐಡಿ : KPF-S1-5993

37
Total Votes
194
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!